Error message

  • Notice: Constant PUBLIC_NEXT_APP_USER_TRENDING_VIDEOS_PARAMETER_DURATION_IN_SECONDS already defined in require_once() (line 662 of /var/www/html/electreps/sites/all/modules/public_next_mobile_json_api/inc/public_next_mobile_json_api_constants.inc).
  • Notice: Constant TRENDING_VIDEO_MIN_LENGTH_IN_SECS already defined in require_once() (line 662 of /var/www/html/electreps/sites/all/modules/public_next_mobile_json_api/inc/public_next_mobile_json_api_constants.inc).

PublicNext

News Subject: 
ಮಕ್ಕಳಿಗೂ ಕೊವ್ಯಾಕ್ಸಿನ್​: 2ರಿಂದ 18 ವರ್ಷದವರಿಗೆ ಲಸಿಕೆ ಹಾಕಲು ಡಿಸಿಜಿಐ ಗ್ರೀನ್ ಸಿಗ್ನಲ್
Upload Image: 
PublicNext-546747-633760-Health-and-Fitness-COVID-node
Category: 
Health & Fitness
COVID
Body: 

ನವದೆಹಲಿ: ಕೊರೊನಾ ಮಹಾಮಾರಿ ವಿರುದ್ಧದ ಹೋರಾಟ ದೇಶದಲ್ಲಿ ಮುಂದುವರೆದಿದ್ದು, ಈಗಾಗಲೇ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಕೋವಿಡ್​​ ಲಸಿಕೆ ನೀಡಲಾಗುತ್ತಿದೆ. ಆದರೆ ಇದೇ ಮೊದಲ ಬಾರಿಗೆ 2ರಿಂದ 18 ವರ್ಷದೊಳಗಿನ ಮಕ್ಕಳಿಗೆ ಕೊವ್ಯಾಕ್ಸಿನ್​​ ಲಸಿಕೆ ನೀಡಲು ತಜ್ಞರ ಸಮಿತಿಯಿಂದ ಶಿಫಾರಸು ಮಾಡಲಾಗಿದೆ.

ಭಾರತ್​ ಬಯೋಟೆಕ್​​ನ ಕೊವ್ಯಾಕ್ಸಿನ್​​ ಲಸಿಕೆ ಮಕ್ಕಳಿಗೆ ನೀಡಲು ವಿಷಯ ತಜ್ಞರ ಸಮಿತಿ ಸಭೆಯಲ್ಲಿ ಗ್ರೀನ್​​ ಸಿಗ್ನಲ್​ ನೀಡಿದ್ದು, ಹೀಗಾಗಿ ತುರ್ತು ಬಳಕೆಗೆ ಅನುಮತಿ ನೀಡುವಂತೆ ಡಿಸಿಜೆಐಗೆ ಶಿಫಾರಸು ಮಾಡಿದೆ.

ಎರಡು ವರ್ಷ ಮೆಲ್ಪಟ್ಟ ಮಕ್ಕಳ ಮೇಲೆ ಭಾರತ್​ ಬಯೋಟೆಕ್​​ನ ಕೊವ್ಯಾಕ್ಸಿನ್​ ಲಸಿಕೆ ಪ್ರಯೋಗ ನಡೆಸಲಾಗಿತ್ತು. ಸೆಪ್ಟೆಂಬರ್​ ತಿಂಗಳಲ್ಲಿ 18ವರ್ಷದೊಳಗಿನ ಮಕ್ಕಳ ಮೇಲೆ 1,2 ಹಾಗೂ 3ನೇ ಹಂತದ ಪ್ರಯೋಗ ಪೂರ್ಣಗೊಳಿಸಿತ್ತು. ಅದರ ಕ್ಲಿನಿಕಲ್​ ಪ್ರಯೋಗದ ದತ್ತಾಂಶವನ್ನ ಡಿಸಿಜೆಐಗೆ ಸಲ್ಲಿಕೆ ಮಾಡಲಾಗಿದೆ.

Reach Count: 
30567
Show Detail Screen Advertisement: 
Yes