Kshetra Samachara

Local News Subject: 
ಹುಬ್ಬಳ್ಳಿ: 63ನೇ ವಾರ್ಡ್ ಬಿಜೆಪಿ ಅಭ್ಯರ್ಥಿ ಮಲ್ಲಪ್ಪ ಶಿರಕೋಳ ಪರ ಪ್ರದೀಪ ಶೆಟ್ಟರ್ ಬಿರುಸಿನ ಪ್ರಚಾರ...!
City: 
Hubballi-Dharwad
Video Thumbnail: 
PublicNext--588105--node-nid
Category: 
Politics
Body: 

ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಚುನಾವಣೆಗೆ ವಾರ್ಡ್ ನಂಬರ 63ರಲ್ಲಿ ಭಾರತೀಯ ಜನತಾ ಪಕ್ಷದಿಂದ ಸ್ಪರ್ಧೆಗೆ ಇಳಿದ ಮಲ್ಲಪ್ಪ ಶಿರಕೋಳ ಅವರು ಪರವಾಗಿ ವಿಧಾನ ಪರಿಷತ್ ಸದಸ್ಯ ಹಾಗೂ ಹಿರಿಯ ರಾಜಕಾರಣಿ ಪ್ರದೀಪ್ ಶೆಟ್ಟರ್ ಅದ್ದೂರಿ ಪ್ರಚಾರ ನಡೆಸಿದ್ದಾರೆ.

ಈಗಾಗಲೇ ಸ್ಥಳೀಯವಾಗಿ ಸಾಕಷ್ಟು ಸಾರ್ವಜನಿಕ ಸಮಸ್ಯೆಗಳನ್ನು ಗಮನಿಸಿರುವ ಜನನಾಯಕ ಮಲ್ಲಪ್ಪ ಶಿರಕೋಳ ಅವರಿಗೆ ಜನರು ಸಾಕಷ್ಟು ಬೆಂಬಲ ನೀಡುತ್ತಿದ್ದಾರೆ. ಈ ಹಿಂದೇ ಕೂಡ ಸಾಕಷ್ಟು ಜನಪರ ಕಾರ್ಯಗಳನ್ನು ಮಾಡುವ ಮೂಲಕ ಗುರುತಿಸಿಕೊಂಡಿರುವ ಮಲ್ಲಪ್ಪ ಶಿರಕೋಳ ಅವರು ಜನ ಮೆಚ್ಚಿದ ಜನನಾಯಕ ಎಂದೇ ಖ್ಯಾತಿ ಪಡೆದಿದ್ದಾರೆ. ಅಲ್ಲದೇ ಪ್ರದೀಪ್ ಶೆಟ್ಟರ್ ಕೂಡ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳನ್ನು ಜನರಿಗೆ ಮನವರಿಕೆ ಮಾಡಿದ್ದಾರೆ.

ಈಗಾಗಲೇ ವಾರ್ಡ್ ನಲ್ಲಿ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಭರವಸೆ ನೀಡಿದ್ದು, ಜನರ ಮೂಲಭೂತ ಸೌಕರ್ಯಗಳ ಸಮಸ್ಯೆ ಹಾಗೂ ಯಾವುದೇ ಸಮಸ್ಯೆಗಳಿಗೂ ಕೂಡಲೇ ಸ್ಪಂದಿಸುವ ವ್ಯಕ್ತಿತ್ವವನ್ನು ಹೊಂದಿರುವ ಮಲ್ಲಪ್ಪ ಶಿರಕೋಳ ಅವರನ್ನು ಜನರು ಈ ಬಾರಿ ಪ್ರಚಂಡ ಬಹುಮತದಿಂದ ಆಯ್ಕೆಮಾಡುವ ಭರವಸೆ ನೀಡಿದ್ದಾರೆ. ಈಗಾಗಲೇ ಎಲ್ಲೆಡೆಯೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಜನನಾಯಕನಿಗೆ ಒಂದು ಅವಕಾಶ ಕೊಡಲು ಜನರು ಸಿದ್ಧರಾಗಿದ್ದಾರೆ.

Reach Count: 
66745
Show Detail Screen Advertisement: 
Yes