Error message

  • Notice: Constant PUBLIC_NEXT_APP_USER_TRENDING_VIDEOS_PARAMETER_DURATION_IN_SECONDS already defined in require_once() (line 662 of /var/www/html/electreps/sites/all/modules/public_next_mobile_json_api/inc/public_next_mobile_json_api_constants.inc).
  • Notice: Constant TRENDING_VIDEO_MIN_LENGTH_IN_SECS already defined in require_once() (line 662 of /var/www/html/electreps/sites/all/modules/public_next_mobile_json_api/inc/public_next_mobile_json_api_constants.inc).

Public News

News Subject: 
ಹಸೆಮಣೆ ಮೇಲೆ ಕುಳಿತಾಗಲೇ ವರನಿಗೆ ಗೂಸಾ ಕೊಟ್ಟ ವಧು.!
Category: 
Viral
Body: 

ನವದೆಹಲಿ: ಇಂದಿನ ಅನೇಕ ಯುವಕರು ಗುಟ್ಕಾ, ಸಿಗರೇಟ್, ಪಾನ್- ಮಸಾಲಾ ಸೇವನೆಯ ಚಟಕ್ಕೆ ಬಿದ್ದು, ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಈ ಬಗ್ಗೆ ಎಷ್ಟೇ ಜಾಗೃತಿ ಮೂಡಿಸಿದರೂ ಹೆಚ್ಚಿನ ಪರಿಣಾಮ ಬಿರುತ್ತಿಲ್ಲ. ಹೀಗೆ ಹಸೆಮಣೆ ಮೇಲೆ ಕುಳಿತಾಗಲೂ ಗುಟ್ಕಾ ಸೇವನೆ ಮಾಡುತ್ತಿದ್ದ ವರನಿಗೆ ವಧು ನಾಲ್ಕು ಬಾರಿಸಿದ್ದಾಳೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಈ ವಿಡಿಯೋದಲ್ಲಿ ವಧು-ವರರಿಬ್ಬರು ಮದುವೆ ಮಂಟಪದಲ್ಲಿ ಕುಳಿತಿರುತ್ತಾರೆ. ಈ ವೇಳೆ ಸುಮ್ಮನೆ ಕುಳಿತುಕೊಳ್ಳದ ಮದುಮಗ ‘ಗುಟ್ಕಾ’ ಅಗಿಯಲು ಶುರುಮಾಡುತ್ತಾನೆ. ಇದನ್ನು ನೋಡಿದ ವಧುವಿನ ಕಣ್ಣು ಕೆಂಪಗಾಗುತ್ತದೆ. ವರನು ‘ಗುಟ್ಕಾ’ ಅಗಿಯುತ್ತಿದ್ದಾನೆ ಎಂದು ತಿಳಿದ ತಕ್ಷಣ ಕೋಪಿಸಿಕೊಂಡ ಆಕೆ ಮೊದಲು ವರನ ಸ್ನೇಹಿತನ ಮೇಲೆ ಹರಿಹಾಯ್ದು ಆತನಿಗೆ ಹೊಡೆಯುತ್ತಾಳೆ. ಬಳಿಕ ಮದುವೆಯಲ್ಲಿಯೂ ‘ಗುಟ್ಕಾ’ ಸೇವಿಸುತ್ತಿಯಾ ಅಂತ ಸಿಟ್ಟಿನಲ್ಲಿ ವರನನ್ನು ತಳ್ಳಿ ನಂತರ ಕಪಾಳಕ್ಕೆ ಹೊಡೆದಿದ್ದಾಳೆ. ಬಾಯಲ್ಲಿರುವ 'ಗುಟ್ಕಾ' ಉಗುಳುವಂತೆ ರೇಗಾಡುತ್ತಾಲೆ. ವಧುವಿನ ಕೋಪಕ್ಕೆ ತುತ್ತಾದ ವರ, ಹೆದರಿ ಕೂಡಲೇ ಗುಟ್ಕಾವನ್ನು ಉಗುಳುತ್ತಾನೆ.

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಈ ವಿಡಿಯೋವನ್ನು ಲಕ್ಷಾಂತರ ಜನರು ವೀಕ್ಷಿಸಿದ್ದಾರೆ. ಅನೇಕರು ಈ ವಿಡಿಯೋ ನೋಡಿ ಬಿದ್ದು ಬಿದ್ದು ನಕ್ಕಿದ್ದು, ವಧುವಿನ ಕೋಪಕ್ಕೆ ತುತ್ತಾದ 'ಗುಟ್ಕಾ' ವರನ ಅವಸ್ಥೆ ಕಂಡು ನಸುನಕ್ಕಿದ್ದಾರೆ.

Reach Count: 
27837
Show Detail Screen Advertisement: 
Yes