Public News
News Subject:
ಕಾರವಾರ: ಅಸ್ವಸ್ಥ ವೃದ್ಧ ಮಹಿಳೆಯನ್ನು ಕುರ್ಚಿಯ ಜೋಲೆಯಲ್ಲಿ ಹೊತ್ತು ಸಾಗಿದ ಯುವಕರು!
Video Thumbnail:
Category:
Human Stories
Body:
ಕಾರವಾರ: ಅನಾರೋಗ್ಯಕ್ಕೆ ತುತ್ತಾದ ವೃದ್ಧೆಯನ್ನು ಕುರ್ಚಿಯ ಜೋಲೆಯಲ್ಲಿ ಹೊತ್ತು, ಗುಡ್ಡದ ಕಡಿದಾದ ದಾರಿ ಇಳಿದು ಸಾರ್ವಜನಿಕರೇ ಆಸ್ಪತ್ರೆಗೆ ಸೇರಿಸಿದ ಘಟನೆ ಕಾರವಾರದ ಮಚ್ಚಳ್ಳಿಯಲ್ಲಿ ನಡೆದಿದೆ.
ಅಮದಳ್ಳಿ ಗ್ರಾಪಂ ವ್ಯಾಪ್ತಿಗೆ ಒಳಪಡುವ ದಟ್ಟಾರಣ್ಯದ ಮಧ್ಯ ಭಾಗದಲ್ಲಿರುವ ಮಚ್ಚಳ್ಳಿ ಗ್ರಾಮದ ನೇಮಿ ಗೌಡ ಅನಾರೋಗ್ಯಕ್ಕೊಳಗಾಗಿದ್ದರು. ರಸ್ತೆ ಸಂಪರ್ಕ ಇಲ್ಲದ ಕಾರಣ ಗ್ರಾಮಕ್ಕೆ ಯಾವುದೇ ಆಂಬ್ಯುಲೆನ್ಸ್ ಅಥವಾ ಇತರ ವಾಹನದ ಸೌಲಭ್ಯ ಇರಲಿಲ್ಲ.
ಸುಮಾರು 5 ಕಿ.ಮೀ. ಗುಡ್ಡದ ಕಡಿದಾದ ದಾರಿಯಲ್ಲಿ ಯುವಕರೇ ಸೇರಿ ಪ್ಲಾಸ್ಟಿಕ್ ಕುರ್ಚಿಯೊಂದನ್ನು ಕಟ್ಟಿಗೆಯ ಕೋಲಿಗೆ ಹಗ್ಗ ಕಟ್ಟಿಕೊಂಡು ಅದರಲ್ಲಿ ಮಹಿಳೆಯನ್ನು ಕೂರಿಸಿ ಅಷ್ಟಷ್ಟು ದೂರಕ್ಕೆ ನಾಲ್ಕು ಜನ ಹೆಗಲ ಮೇಲೆ ಹೊತ್ತು ಅಮದಳ್ಳಿ ಗ್ರಾಮವನ್ನು ತಲುಪಿ, ಬಳಿಕ ಅಲ್ಲಿಂದ ವಾಹನದ ಮೂಲಕ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ವೃದ್ಧೆಗೆ ಚಿಕಿತ್ಸೆ ಲಭಿಸಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ.
Reach Count:
45001