Hubballi-Dharwad
ಶಿವಾಜಿ ಮಹಾರಾಜರು ತಾಯಿಯ ಮೇಲೆ ತೋರಿಸಿದ ಪ್ರೀತಿ,ತಾಯಿ ಜೀಜಾಬಾಯಿ ಮಗನ ಶ್ರೇಷ್ಠ ವ್ಯಕ್ತಿ ಮಾಡಲು ಮಾಡಿರುವ ತ್ಯಾಗ ಜೀವನ, ಹೇಗಾದರೂ ಮಾಡಿ ಸ್ವರಾಜ್ಯ ಮಾಡಬೇಕು ಅನ್ನುವ ಶಿವಾಜಿ ಮಹಾರಾಜರ ಛಲ, ಈ ಛಲಕ್ಕೆ ಸಾಥ್ ನೀಡಿದ ಸಮಸ್ತ ಹಿಂದವೀ ಸ್ವರಾಜ್ಯದ ಸೈನಿಕರು.ಸರದಾರರ ಪ್ರಾಣತ್ಯಾಗ, ಮಹಾರಾಜರ ಜೀವನದಲ್ಲಿ ನಡೆದುಕೊಂಡ ನಡೆಯನ್ನು ಸಂಪೂರ್ಣ ಇತಿಹಾಸ ಸುಮಾರು ೫ ತಿಂಗಳು ಸಣ್ಣ ಸಣ್ಣ ಸಂಚಿಕೆಗಳು ಮಾಡಿ ತಮಗೆ ತಿಳಿಸುವ ಸಣ್ಣ ಪ್ರಯತ್ನ ಮಾಡಿದ್ದೇನೆ.
ಇದರಿಂದ ನನಗೂ ಶಿವಾಜಿ ಮಹಾರಾಜರ ಸಂಪೂರ್ಣ ಇತಿಹಾಸ ತಿಳಿಯಲು ಅವಕಾಶ ಆಯಿತು ಮತ್ತು ತಮಗೂ ತಿಳಿಸುವ ಪ್ರಯತ್ನ ಮಾಡಿದ್ದೇನೆ.
ಶಿವಾಜಿ ಮಹಾರಾಜರು ಅಷ್ಟು ಹಠ ಹಿಡಿದು ಸ್ವರಾಜ್ಯ ಕಟ್ಟಿದ್ದರಿಂದ ಇಂದು ಅದೇ ಮಾರ್ಗದರ್ಶದಿಂದ, ನಾವು ಬದುಕಲು ಹಲವು ಸಾಮಾನ್ಯ ಮತ್ತು ಗಣ್ಯ ವ್ಯಕ್ತಿಗಳ ಪ್ರಾಣತ್ಯಾಗ ಸ್ವಾತಂತ್ರ್ಯಾ ಹೋರಾಟದಿಂದ ಇಂದು ಪ್ರಜಾಪ್ರಭುತ್ವದಲ್ಲಿ ಬದುಕುತ್ತಿದ್ದೇವೆ.
ಶಿವಾಜಿ ಮಹಾರಾಜರ ಜೀವನ ಚರಿತ್ರೆ ನಮ್ಮ ಜೀವನ ಯಶಸ್ವಿಗೆ ಸ್ಪೂರ್ತಿ ಆಗಲಿ.
ನಾವು ಪ್ರಾರಂಭ ಮಾಡಿದ ಕಾರ್ಯ ಸಿದ್ಧಿ ಮಾಡಲು ಎಲ್ಲರೂ ಸಹಕಾರ ನೀಡಿದರೆ ಮಾತ್ರ ಯಶಸ್ವಿ ಆಗುಲು ಸಾಧ್ಯ.
ಶಿವಾಜಿ ಮಹಾರಾಜರ ಇತಿಹಾಸ ಬರೆಯಲು ಪ್ರೋತ್ಸಾಹ ನೀಡಿದ ಸಮಸ್ತ ಜನತೆಗೆ ಹೃದಯ ಪೂರ್ವಕ ಧನ್ಯವಾದಗಳು.??
? ಜೈ ಭವಾನಿ, ಜೈ ಶಿವಾಜಿ, ಜೈ ಹಿಂದವೀ ಸ್ವರಾಜ್ಯ.?
ತುಕಾರಾಮ ಬ ಜಾಧವ✍️
ಕನಕೂರ