Hubballi-Dharwad
ಕರೊನಾ ಸೋಂಕಿತರ ಸಂಖ್ಯೆ ಜಾಸ್ತಿಯಾಗುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕದಂತೆ ಕೇರಳದಲ್ಲೂ ಲಾಕ್ಡೌನ್ ಜಾರಿಯಲ್ಲಿದೆ. ಸಾರಿಗೆ ವ್ಯವಸ್ಥೆ ಸಂಪೂರ್ಣವಾಗಿ ಸ್ಥಗಿತಗೊಂಡಿರುವ ಈ ಸಮಯದಲ್ಲಿ ವ್ಯಕ್ತಿಯೊಬ್ಬ ತನ್ನ ಹೆಂಡತಿ ಮತ್ತು ಮಗುವನ್ನು ನೋಡಲೆಂದು ಖಾಸಗಿ ಬಸ್ಸನ್ನೇ ಕದ್ದಿರುವ ಘಟನೆ ಕೇರಳದಲ್ಲಿ ನಡೆದಿದೆ.
30 ವರ್ಷದ ದಿನೂಪ್ ಕಳ್ಳತನ ಮಾಡಿರುವ ವ್ಯಕ್ತಿ. ಆತನ ಹೆಂಡತಿ ಮತ್ತು ಮಗು ಪಥನಮತ್ತಟ್ಟಾ ಜಿಲ್ಲೆಯ ತಿರುವಲ್ಲಾದಲ್ಲಿ ವಾಸವಿದ್ದಾರೆ. ಆದರೆ ಆತನು ಕೆಲಸ ಮಾಡುತ್ತಿದ್ದಿದ್ದು 270 ಕಿಮೀ ದೂರದ ಕೋಜಿಕೋಡ್ನಲ್ಲಿ. ಲಾಕ್ಡೌನ್ನಲ್ಲಿ ಕೋಜಿಕೋಡ್ನಲ್ಲೇ ಲಾಕ್ ಆಗಿದ್ದ ದಿನೂಪ್ ತಿರುವಲ್ಲಾಕ್ಕೆ ತೆರಳಲು ಉಪಾಯವೊಂದನ್ನು ಮಾಡಿದ್ದಾನೆ. ಅಲ್ಲೇ ನಿಲ್ಲಿಸಿದ್ದ ಬಸ್ ಒಂದನ್ನು ಗಮನಿಸಿದ್ದಾನೆ.
ಅದರ ಸುತ್ತ ಮುತ್ತ ಯಾರೂ ಇಲ್ಲದನ್ನು ಗಮನಿಸಿ, ಬಸ್ಸು ಹತ್ತಿ, ಅದನ್ನು ಕಷ್ಟ ಪಟ್ಟು ಸ್ಟಾರ್ಟ್ ಮಾಡಿದ್ದಾನೆ. ಗಾಡಿಯಲ್ಲಿ ಪೂರ್ತಿ ಇಂಧನ ಇದ್ದಿದ್ದರಿಂದ ಅದನ್ನು ಊರಿಗೆ ತೆಗೆದುಕೊಂಡು ಹೋಗಬಹುದು ಎನ್ನುವ ನಂಬಿಕೆಯ ಮೇಲೆ ಗಾಡಿ ಚಲಿಸಿದ್ದಾನೆ.
ಶನಿವಾರ ರಾತ್ರಿ ಕೋಜಿಕೋಡ್ನಿಂದ ಹೊರಟು, ಮಲಪ್ಪುರಂ, ತ್ರಿಶೂರ್, ಎರ್ನಾಕುಲಂ ಮೂಲಕ ಓಡಿ ಕೊಟ್ಟಾಯಂ ಜಿಲ್ಲೆಯನ್ನು ಪ್ರವೇಶಿಸಿದ್ದಾನೆ. ಆದರೆ ಅಲ್ಲಿನ ಪ್ರಸಿದ್ಧ ಪ್ರವಾಸಿ ತಾಣವಾದ ಕುಮಾರಕೋಮ್ನಲ್ಲಿ ಪೊಲೀಸರು ಆತನನ್ನು ತಡೆದಿದ್ದಾರೆ. ಈ ಹಿಂದೆ ನಾಲ್ಕು ಜಿಲ್ಲೆಗಳಲ್ಲಿ ತಾನು ಕಾರ್ಮಿಕರನ್ನು ಪಥನಮತ್ತಟ್ಟಾ ಬೇರೆಡೆ ಸಾಗಿಸಲು ಹೋಗುತ್ತಿರುವುದಾಗಿ, ತನಗೆ ಸರ್ಕಾರವೇ ಈ ಕೆಲಸ ಕೊಟ್ಟಿರುವುದಾಗಿ ಸುಳ್ಳು ಹೇಳಿ ತಪ್ಪಿಸಕೊಂಡಿದ್ದ ದಿನೂಪ್ ಇಲ್ಲಿ ಸಿಕ್ಕಿಹಾಕಿಕೊಂಡಿದ್ದಾನೆ.
ಡ್ರೈವಿಂಗ್ ಲೈಸೆನ್ಸ್ ಇಲ್ಲದ ಹಿನ್ನೆಲೆಯಲ್ಲಿ ಆತನ ಮೇಲೆ ಅನುಮಾನ ಬಂದ ಪೊಲೀಸರು ಆರ್ಟಿಒ ಆಯಪ್ನಲ್ಲಿ ಗಾಡಿಯ ನಂಬರ್ ಹೊಡೆದು ಚೆಕ್ ಮಾಡಿದ್ದಾರೆ. ಅದರಲ್ಲಿದ್ದ ಗಾಡಿ ಮಾಲೀಕನ ನಂಬರಿಗೆ ಕರೆ ಮಾಡಿ ಗಾಡಿಯ ಬಗ್ಗೆ ವಿಚಾರಿಸಿದಾಗ ದಿನೂಪ್ ಸಿಕ್ಕಿಬಿದ್ದಿದ್ದಾನೆ. (ಏಜೆನ್ಸೀಸ್)
p-er_n439,PublicNextp-er__n p-er_n21964,Help-PublicNextp-er__n p-er_n299990,Hubli dharawadp-er__n p-er_n278540,PUBLIC NEWSp-er__nNEWS 24 KARNATAKA p-er_n283795,newsp-er__n p-er_n247705,Ameen Mulla (muddebihal news)p-er__n p-er_n282142,NEWS OF CHANNARAYAPATNAp-er__n p-er_n193739,ಆಮ್ ಆದ್ಮಿ ಪಕ್ಷ ಹುಬ್ಬಳ್ಳಿ-ಧಾರವಾಡp-er__n