Public News

News Subject: 
ಪಿಜ್ಜಾ ನೀಡದ ಕಂಪನಿಯಿಂದ ಯುವತಿಗೆ ಸಿಕ್ತು 23 ಲಕ್ಷ ರೂ. ಪರಿಹಾರ.!
Upload Image: 
PublicNext--479233--node-nid
Category: 
Law and Order
International
Body: 

ಲಂಡನ್‌: ಪಿಜ್ಜಾ ನೀಡದ ವಿಚಾರವಾಗಿ ತಾನು ಕೆಲಸ ಮಾಡುತ್ತಿದ್ದ ಕಂಪನಿಯ ವಿರುದ್ಧ ನ್ಯಾಯಾಲಯದ ಮೊರೆ ಹೋಗಿದ್ದ ಯುವತಿಯೊಬ್ಬಳಿಗೆ 23 ಲಕ್ಷ ರೂ. ಪರಿಹಾರ ನೀಡುವಂತೆ ಸಂಬಂಧಪಟ್ಟ ಕಂಪನಿಗೆ ಕೋರ್ಟ್ ಆದೇಶಿಸಿದೆ.

ಯುನೈಟೆಡ್‌ ಕಿಂಗ್‌ಡಂನ ವ್ಯಾಟ್‌ಫೋರ್ಡ್‌ನಲ್ಲಿರುವ ಹಾರ್ಟ್‌ವೆಲ್ ಎಂಬ ಫೋರ್ಡ್‌ ಕಂಪನಿಯ ಕಾರು ಶೋರೂಂನಲ್ಲಿ ಮಾಲ್ಗೊರ್‌ಜಟಾ ಲೆವಿಕ್ರಾ ಎಂಬುವರು 2017ರಿಂದ 2019ರವರೆಗೆ ಸೇವೆ ಸಲ್ಲಿಸಿದ್ದರು. ಆ ಶೋರೂಂನಲ್ಲಿ ಪ್ರತಿ ತಿಂಗಳ ಕಡೆಯ ಶುಕ್ರವಾರ ಪಿಜ್ಜಾ ಫ್ರೈಡೇ ಆಚರಿಸಲಾಗುತ್ತಿತ್ತು. ಅದರಲ್ಲಿ ಪಾಲ್ಗೊಳ್ಳುತ್ತಿದ್ದ ಎಲ್ಲಾ ಸಿಬ್ಬಂದಿಗೂ ಒಂದೊಂದು ಪಿಜ್ಜಾವನ್ನು ನೀಡಲಾಗುತ್ತಿತ್ತು. ಆದರೆ ಲೆವಿಕ್ರಾರನ್ನು ಆ ಪಾರ್ಟಿಗೆ ಕರೆಯುತ್ತಿರಲಿಲ್ಲ. ಇದನ್ನು ಪ್ರಶ್ನಿಸಿ, ಲೆವಿಕ್ರಾ ನ್ಯಾಯಾಲಯದ ಮೆಟ್ಟಿಲೇರಿದ್ದರು.

ಲೆವಿಕ್ರಾ ಗುತ್ತಿಗೆ ನೌಕರಳಾಗಿದ್ದರಿಂದ ಪಾರ್ಟಿಗೆ ಕರೆಯುತ್ತಿರಲಿಲ್ಲ ಎಂಬ ಕಂಪನಿಯ ವಾದ ತಳ್ಳಿಹಾಕಿದ ನ್ಯಾಯಾಲಯ, ಆರ್ಥಿಕ ಪರಿಹಾರಕ್ಕೆ ಆದೇಶಿಸಿದೆ.

Reach Count: 
40541