Public News

News Subject: 
ಬೆಳಗಾವಿ: ಕೋವಿಡ್ ವಿರುದ್ಧದ ಹೋರಾಟಕ್ಕೆ ಕೆಎಲ್ಇ ಮಹಿಳಾ ಘಟಕ ಸನ್ನದ್ದ
Top News Rank: 
2
Is Sensitive: 
No
Is Special NEWS: 
0
Send Notification: 
0
Body: 

ಬೆಳಗಾವಿ: ದೇಶದ ಜನತೆಯನ್ನು ತಲ್ಲಣಗೊಳಿಸುತ್ತಿರುವ ಮಹಾಮಾರಿ ಕೋವಿಡ್ ಸೋಂಕಿನ ವಿರುದ್ಧದ ಸಮಯರಕ್ಕೆ ಬೆಳಗಾವಿಯ ಕೆಎಲ್ಇ ಸಂಸ್ಥೆಯ ಸ್ವಶಕ್ತಿ ಮಹಿಳಾ ಸಬಲೀಕರಣ ಕೇಂದ್ರವು ಕೈ ಜೋಡಿಸಿದೆ. ಕೋವಿಡ್ ರೋಗಿಗಳ ಆರೈಕೆಗಾಗಿ ಕೆ.ಎಲ್.ಇ ಲಿಂಗರಾಜ್ ಕ್ಯಾಂಪಸನಲ್ಲಿ ಐಸೋಲೇಶನ್ ( ಕೋವಿಡ್ ಕೇರ್ ಸೆಂಟರ್ ) ಕೇಂದ್ರ ತೆರೆದಿದೆ.

ಜಿಲ್ಲೆಯಲ್ಲಿ ಕೋವಿಡ್ ಉಲ್ಬಣಗೊಂಡಿದ್ದು, ಇತ್ತ ಆಸ್ಪತ್ರೆಗಳಲ್ಲಿ ಬೆಡ್ ಅಭಾವ ಕೂಡ ಕಾಡುತ್ತಿದೆ. ಸೋಂಕಿನ ಕಡಿಮೆ ಗುಣಲಕ್ಷಣವುಳ್ಳವರನ್ನ ಐಸೋಲೇಶನ್ ಗೆ ಒಳಪಡಿಸಲು ಕೂಡ ಸಮಸ್ಯೆಯಾಗುತ್ತದೆ. ಇದನ್ನ ಮನಗಂಡಿರುವ ಕೆ ಎಲ್ ಇ ಮಹಿಳಾ ಘಟಕ, ಕೈಗೆಟುಕುವ ದರದಲ್ಲಿ ಕೋವಿಡ್ ಕೇಂದ್ರ ಪ್ರಾರಂಭಿಸಿದೆ.

ಈ ಕೇಂದ್ರದಲ್ಲಿ ಉಳಿಯುವ ರೋಗಿಗಳ ಹಾಗೂ ಸಂಬಂಧಿಕರ ಜೊತೆ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ಜ್ಯೂಮ್ ಆ್ಯಪ್ ಬಳಸಲಾಗುತ್ತಿದೆ. ಸಂಬಂಧಿಕರಿಗೆ ಹಾಗೂ ರೋಗಿಗಳಿಗೆ ಕೇಂದ್ರದಲ್ಲಿರುವ ಎರಡು ಪ್ರತ್ಯೇಕ ಕೊಠಡಿಯಲ್ಲಿ ಜ್ಯೂಮ್ ಆ್ಯಪ್ ಬಳಸುವ ವ್ಯವಸ್ಥೆ ಮಾಡಲಾಗಿದೆ. ಪ್ರತಿ ನಿತ್ಯ ಮನೆಯವರ ಜೊತೆ ಮಾತನಾಡುವ ಅವಕಾಶ ಮಾಡಿಕೊಡಲಾಗುತ್ತಿದೆ. ಇದರಿಂದ ರೋಗಿ ಹಾಗೂ ಅವರ ಸಂಬಂಧಿಕರ ಮಾನಸಿಕ ಸ್ಥೈರ್ಯ ಹೆಚ್ಚಿಸುವ ಪ್ರಯತ್ನ ಮಾಡುತ್ತಿದೆ.

ಇಲ್ಲಿ ದಾಖಲಾಗುವವರಿಗೆ ಆರೋಗ್ಯಯುತ ಹಾಗೂ ಗುಣಮಟ್ಟದ ಮುಂಜಾನೆ ,ಉಪಾಹಾರ, ಮಧ್ಯಾಹ್ನ ಹಾಗೂ ರಾತ್ರಿ ಹೊತ್ತು ಊಟ ಮತ್ತಯ ಸಂಜೆ ಚಹಾ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಕೋವಿಡ್ ಸೋಂಕಿನಿಂದ ಬಳಲುತ್ತಿರುವವರ ಮಾನಸಿಕ ಸ್ಥೈರ್ಯ ಕುಂದದಂತೆ ನೋಡಿಕೊಳ್ಳಲು ನಿತ್ಯ ಯೋಗಾಸನ ಮಾಡಿಸಲಾಗುತ್ತದೆ. ಪ್ರತಿ ದಿನ ಮುಂಜಾನೆ ಹಾಗೂ ಸಾಯಂಕಲ ಯೋಗತಜ್ಞರಿಂದ ಯೋಗಾಸನ ಹೇಳಿ ಕೊಡಲಾಗುತ್ತದೆ.

ಇನ್ನುಳಿದಂತೆ ತರಬೇತಿ ಪಡೆದ ನೂರಿತ ವೈದ್ಯರಿಂದ ದಿನದ 24 ಗಂಟೆಗಳ ಕಾಲ ಆರೈಕೆ ವ್ಯವಸ್ಥೆ ಮಾಡಲಾಗುತ್ತದೆ. ಬಿಪಿ ಹಾಗೂ ಶುಗರ್ ಚೆಕ್ ಮಾಡಲಾಗುತ್ತದೆ. ಆಂಬ್ಯುಲೆನ್ಸ್ ವ್ಯವಸ್ಥೆ ಇದೆ. ಇದು ಐಸೋಲೇಶನ್ ಕೇಂದ್ರವಾಗಿರುವುದರಿಂದ ಆಕ್ಸಿಜನ್ ಬೆಡ್ ವ್ಯವಸ್ಥೆ ಇರುವುದಿಲ್ಲ. ಕಡಿಮೆ ಗುಣಲಕ್ಷಣಗಳನ್ನು ಹೊಂದಿರುವವರ ಆರೈಕೆ ಮಾತ್ರ ಮಾಡಲಾಗುತ್ತಿದೆ.

ಹೆಚ್ಚಿನ ಮಾಹಿತಿಗೆ +918197671083 | +919986631942 ಇಲ್ಲಿಗೆ ಸಂಪರ್ಕಿಸಬಹುದು ಎಂದು ಕೆ.ಎಲ್.ಇ. ಸ್ವಶಕ್ತಿ ಮಹಿಳಾ ಸಬಲೀಕರಣ ಘಟಕ ತಿಳಿಸಿದೆ.

Video Thumbnail: 
PublicNext--479224--node-nid
Video: 
Category: 
Health & Fitness
COVID
Reach Count: 
69285
State: 
Karnataka
stringers: 
Basavaraj(Belgaum)
SEO Keywords: 
belagavi,corona,bed,kle,,Health-and-Fitness,COVID