Public News

News Subject: 
ಬೆಳಗಾವಿ: ಪ್ರಹ್ಲಾದ ಜೋಶಿ ಪ್ರಯತ್ನದಿಂದ ರಾಜ್ಯಕ್ಕೆ ಆಕ್ಸಿಜನ್ ಬಂದಿದೆ: ಗೋವಿಂದ ಕಾರಜೋಳ
Top News Rank: 
3
Is Sensitive: 
No
Is Special NEWS: 
0
Send Notification: 
0
Body: 

ಬೆಳಗಾವಿ: ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರ ಪ್ರಯತ್ನದಿಂದ ರಾಜ್ಯಕ್ಕೆ 20 ಟನ್ ಆಕ್ಸಿಜನ್‌ನ 6 ಟ್ಯಾಂಕರ್‌ಗಳು ಬಂದಿವೆ. ಅವರಿಗೆ ಧನ್ಯವಾದಗಳು ಸಲ್ಲಿಸಲು ಬಯಸುತ್ತೇನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಹೇಳಿದ್ದಾರೆ.‌

ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ‌ಹೆಚ್ಚಾಗುತ್ತಿದ್ದು, ಆಕ್ಸಿಜನ್ ಅಭಾವದಿಂದ ಮೃತರ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ. ಜಿಲ್ಲೆಗೆ ಆಕ್ಸಿಜನ್ ಪೂರೈಸಲು ಪ್ರತ್ಯೇಕ ಆಕ್ಸಿಜನ್ ಟ್ಯಾಂಕರ್ ಇರಲಿಲ್ಲ. ಟ್ಯಾಂಕರ್ ಮಂಜೂರು ಆಗಿದ್ದು, ಆಕ್ಸಿಜನ್ ಅಭಾವ ನೀಗಿಸಲಿದೆ. ಅದರಲ್ಲಿ ಬೆಳಗಾವಿ ಜಿಲ್ಲೆಗೊಂದು ಆಕ್ಸಿಜನ್ ಟ್ಯಾಂಕರ್ ಬರಲಿದೆ ಎಂದರು.

ಈ ಮೊದಲು ಟ್ಯಾಂಕರ್ ಆಕ್ಸಿಜನ್ ಪೂರೈಸುತ್ತಿತ್ತು. ಆದರೆ ಅದರ ಸೇವೆ ಇದೀಗ ಸ್ಥಗಿತವಾಗಿದೆ. ಹೀಗಾಗಿ ಜಿಲ್ಲೆಗೆ ಟ್ಯಾಂಕರ್ ಮಂಜೂರು ಮಾಡುವಂತೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರಲ್ಲಿ ಮನವಿ ಮಾಡಿದ್ದೆ ಎಂದು ಡಿಸಿಎಂ ಗೋವಿಂದ ಕಾರಜೋಳ ಹೇಳಿದರು.‌

Video: 
Category: 
Politics
COVID
Reach Count: 
91618
State: 
Karnataka
stringers: 
Basavaraj(Belgaum)
SEO Keywords: 
joshi,karjolla,oxygen,,Politics,COVID