Kshetra Samachara
ಉಡುಪಿ: ಮಠದ ಅಂಗಳದಲ್ಲಿ ಮತ್ತೊಂದು ವಿವಾದದ ಸದ್ದು ಕೇಳಿ ಬಂದಿದೆ. ಶಿರೂರು ಮಠಕ್ಕೆ ನೂತನ ಯತಿ ನೇಮಕ ವಿಚಾರವಾಗಿ
ವಿಶ್ವವಿಜಯರು ಆಕ್ಷೇಪ ಎತ್ತಿದ್ದಾರೆ!
ಈ ವಿಶ್ವವಿಜಯ ತೀರ್ಥರು ದಶಕಗಳ ಹಿಂದೆ ಪೇಜಾವರ ಮಠಾಧೀಶರಾಗಿದ್ದರು ಎಂಬುದು ಗಮನಾರ್ಹ ಸಂಗತಿ. ನೂತನ ಯತಿ ನೇಮಕದ ಧಾರ್ಮಿಕ ಕಾರ್ಯ ಈಗ ನಡೆಯುತ್ತಿದೆ. ನೂತನ ಯತಿಯ ನೇಮಕ ವಾಗುತ್ತಿರುವುದು ತುಂಬಾ ಶೋಚನೀಯ ವಿಚಾರ! ದೇಶ -ರಾಜ್ಯ ಕೊರೊನಾದಿಂದ ತತ್ತರಿಸಿ ಹೋಗಿದೆ. ರಾಜ್ಯದಲ್ಲಿ ಲಾಕ್ ಡೌನ್ ಘೋಷಣೆಯಾಗಿದೆ. ಈ ಸಂದರ್ಭ ಅನೇಕ ಕಠಿಣ ನಿಯಮಗಳನ್ನು ಪಾಲಿಸಬೇಕಾಗುತ್ತದೆ ಎಂದಿರುವ ಅವರು, ಕೊರೊನಾ ರೂಲ್ಸ್ ಗಳನ್ನು ಫಾಲೋ ಮಾಡಲು ಸಾಧ್ಯವಾಗುವುದಿಲ್ಲ ಎಂದು ಹೇಳಿದ್ದಾರೆ.
2017-2019 ರಲ್ಲಿ ನಾನು ಅಷ್ಟಮಠಾಧೀಶರ ವಿರುದ್ಧ ಕೋರ್ಟಿನಲ್ಲಿ ಕೇಸು ಹಾಕಿದ್ದೇನೆ. ಬಾಲಸನ್ಯಾಸ ಮಾಡಬಾರದು ಎಂದು ಕೋರ್ಟ್ ನ ಮೊರೆ ಹೋಗಿದ್ದೇನೆ. ಇದೀಗ 15ರ ಹರೆಯದ ಬಾಲಕನಿಗೆ ಸನ್ಯಾಸತ್ವ ನೀಡಲಾಗುತ್ತಿದೆ. ಇದು ಅಶಾಸ್ತ್ರೀಯ ಅವೈಜ್ಞಾನಿಕ ನಡೆ ಎಂದಿದ್ದಾರೆ.
ವೈರಾಗ್ಯ ಬಂದಾಗ ಸನ್ಯಾಸತ್ವ ನೀಡಬೇಕು ಎಂದು ಮಧ್ವ ವಿಜಯದಲ್ಲಿ ಹೇಳಿದೆ. ವೇದಾಂತ, ತರ್ಕ, ಸಂಸ್ಕೃತ ಜ್ಞಾನ ಇಲ್ಲದ
ಅಪ್ರಾಪ್ತ ಬಾಲಕನಿಗೆ ವೈರಾಗ್ಯ ಬರುವುದು ಹೇಗೆ? ಎಂದು ಪ್ರಶ್ನಿಸಿರುವ ವಿಶ್ವವಿಜಯರು, ಬಾಲಸನ್ಯಾಸ ರದ್ದಾಗಬೇಕು ಎಂದು ಕಾನೂನು ಹೋರಾಟ ಮಾಡುತ್ತಿದ್ದೇನೆ. ಬಾಲಸನ್ಯಾಸದಿಂದ ಅಷ್ಟಮಠಗಳಲ್ಲಿ ಅನರ್ಥಗಳು ಆಗುತ್ತಿದ್ದವು.
ವಿದ್ಯಮಾನ್ಯ ಮತ್ತು ವಿಶ್ವೇಶತೀರ್ಥರು ಬಾಲಸನ್ಯಾಸ ಅಸಮಂಜಸ ಎಂದಿದ್ದರು. ಈಗ ಯತಿ ನೇಮಿಸುತ್ತಿರುವ ಸೋದೆ ಮಠಾಧೀಶರ ನಡೆ ಸರಿಯಲ್ಲ.
ಲಾಕ್ ಡೌನ್ ಸಮಯದಲ್ಲಿ ಯಾವುದೇ ಧಾರ್ಮಿಕ ಕಾರ್ಯಕ್ರಮ ನಡೆಸಬಾರದು. ಈ ಕಾರ್ಯಕ್ರಮ ಹೇಗೆ ನಡೆಯಿತು? ಹೇಗೆ ಅವಕಾಶ ನೀಡಲಾಯಿತು?ಕೋರ್ಟಿನಲ್ಲಿ ಪ್ರಕರಣ ಇರುವಾಗ ಉತ್ತರಾಧಿಕಾರಿ ನೇಮಕ ಸರಿಯಲ್ಲ ಎಂದು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.