Home

E.g., 17/10/2021
PublicNext

Subject ಜೈಲು ಸೇರಿದ ಆರ್ಯನ್ ಗೆ ಅದೃಷ್ಟ ಖುಲಾಯಿಸುತ್ತಾ..?

ಕನ್ನಡ ಇಂಡಸ್ಟ್ರೀಯಲ್ಲಿ ಒಂದು ಮಾತು ಚಾಲ್ತಿಯಲ್ಲಿದೆ. ಅದು ಎಷ್ಟು ನಿಜವೋ ಎಷ್ಟು ಸುಳ್ಳೋ ಹೇಳೋದು ಕಷ್ಟ. ಆದರೆ, ಅದು ವೆರಿ ಇಂಟ್ರಸ್ಟಿಂಗ್ ಆಗಿಯೇ ಇದೆ. ಒಂದೊಮ್ಮೆ ಸ್ಟಾರ್ ನಟ ಜೈಲಿಗೆ ಹೋಗಿ ವಾಪಾಸ್ ಬಂದ್ರೆ, ಆ ನಟನಿಗೆ ಲಕ್ ಹೊಡೆಯುತ್ತದೆ ಅನ್ನೋ ಮಾತದು.ಅದು ಕಿಂಗ್ ಖಾನ್ ಶಾರುಕ್ ಪುತ್ರ ಆರ್ಯನ್ ಖಾನ್ ವಿಷಯದಲ್ಲೂ ನಿಜ ಆಗುತ್ತದೆಯೇ ? ಇಲ್ಲಿದೆ ಅದರ ಸುತ್ತ ಒಂದು ವಿಶ್ಲೇಷಣೆ.


Category: Cinema
Post date: 12-10-2121
PublicNext
PublicNext--633624--node-nid
Subject ತೆಲಂಗಾಣಕ್ಕೆ ರಾಯಚೂರು ಜಿಲ್ಲೆ ಸೇರಿಸಿ ಬಿಡಿ: ಶಿವರಾಜ್ ಪಾಟೀಲ್

ರಾಯಚೂರು: ಉತ್ತರ ಕರ್ನಾಟಕ ಅಂದ್ರೆ ಹುಬ್ಬಳ್ಳಿ-ಧಾರವಾಡ ಮತ್ತು ಬೆಳಗಾವಿ ಹಾಗೂ ಕಲ್ಯಾಣ ಕರ್ನಾಟಕ ಅಂದ್ರೆ, ಕಲಬುರ್ಗಿ,ಬೀದರ ಅನ್ನೋ ಹಾಗೆ ಆಗಿದೆ. ಹೀಗಾಗಿಯೇ ರಾಯಚೂರು ಜಿಲ್ಲೆಯ ಅಭಿವೃದ್ದಿ ಆಗುತ್ತಲೇ ಇಲ್ಲ. ನಮ್ಮ ಜಿಲ್ಲೆಯನ್ನ ತೆಲಂಗಾಣ ರಾಜ್ಯಕ್ಕೆ ಸೇರಿಸಿ ಬಿಡಿ ಅಂತ ಶಾಸಕ ಶಿವರಾಜ್ ಪಾಟೀಲ್ ಹೇಳಿಕೆ ನೀಡಿದ್ದರು. ಈ ಒಂದೇ ಒಂದು ಹೇಳಿಕೆ ಭಾರಿ ಚರ್ಚೆಗೂ ಕಾರಣವಾಗಿತ್ತು.

ರಾಯಚೂರು ಜಿಲ್ಲೆ ಅಭಿವೃದ್ಧಿ ಕಾಣುತ್ತಿಲ್ಲ. ಇದನ್ನ ತೆಲಂಗಾಣಕ್ಕೆ ಸೇರಿಸಿ ಬಿಡಿ ಅಂತಲೇ ಶಾಸಕ ಶಿವರಾಜ್ ಪಾಟೀಲ್ ಇತ್ತೀಚಿಗೆ ಪಶುಸಂಗೋಪನಾ ಸಚಿವ ಪ್ರಭು ಚವ್ಹಾನ್ ಮುಂದೆ ಹೇಳಿದ್ದರು. ಈ ಮಾತು ಅತಿ ಹೆಚ್ಚು ಚರ್ಚೆನೂ ಆಯಿತು...
Category: Politics
Post date: 12-10-2121

Kshetra Samachara
PublicNext--633615--node-nid
Subject ದಕ್ಷಿಣ ಕನ್ನಡ: ಜಿಲ್ಲೆಯಲ್ಲಿ 27 ಜನರಿಗೆ ಕೊರೊನಾ- ಮೂವರು ಬಲಿ

ಮಂಗಳೂರು: ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಕೊಂಚ ಇಳಿಕೆ ಕಂಡಿದೆ. ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನೀಡಿದ ಮಾಹಿತಿ ಪ್ರಕಾರ, ಜಿಲ್ಲೆಯಲ್ಲಿ ಇಂದು 27 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಒಟ್ಟು ಸೋಂಕಿತರ ಸಂಖ್ಯೆ 1,14,919ಕ್ಕೆ ಏರಿಕೆಯಾಗಿದೆ.

ಸೋಂಕಿನಿಂದ ಇಂದು 64 ಜನ ಸುಧಾರಿಸಿಕೊಂಡು ಆಸ್ಪತ್ರೆಯಿಂದ ಡಿಸ್ಚಾರ್ಚ್ ಆಗಿದ್ದಾರೆ. ಈ ಮೂಲಕ ಒಟ್ಟು ಡಿಸ್ಚಾರ್ಚ್ ಆದವರ ಸಂಖ್ಯೆ 1,12,841ಕ್ಕೆ ಏರಿಕೆಯಾಗಿದೆ. ಇನ್ನು ಸೋಂಕಿನಿಂದ ಇಂದು ಮೂವರು ಸಾವನ್ನಪ್ಪಿದ್ದಾರೆ. ಈವರೆಗೂ 1,666 ಜನ ಹೆಮ್ಮಾರಿ ಕೊರೊನಾಗೆ ಬಲಿಯಾಗಿದ್ದಾರೆ. ಜಿಲ್ಲೆಯಲ್ಲಿ 405 ಸಕ್ರಿಯ ಪ್ರಕರಣಗಳಿವೆ.


Category: Health & Fitness, COVID
Post date: 12-10-2121
City: Mangalore
PublicNext

Subject ಕೊಪ್ಪಳ: ಅಸಭ್ಯವಾಗಿ ವರ್ತಿಸಿದ ಯುವಕ : ಚಪ್ಪಲಿಯಿಂದ ಥಳಿಸಿದ ಮಹಿಳೆ

ಕೊಪ್ಪಳ: ಯುವಕನೋರ್ವ ಮಹಿಳೆಯೊಬ್ಬರ ಜೊತೆ ಅಸಭ್ಯವಾಗಿ ವರ್ತಿಸುತ್ತಿದ್ದಂತೆ ಮಹಿಳೆ ಚಪ್ಪಲಿಯಿಂದ ಥಳಿಸಿದ ಘಟನೆ ಕೊಪ್ಪಳದ ಕಾರಟಗಿ ತಾಲೂಕಿನ ಸಿದ್ದಾಪುರ ಗ್ರಾಮದಲ್ಲಿ ನಡೆದಿದೆ.

ಇನ್ನು ಮಹಿಳೆ ಯುವಕನಿಗೆ ಚಪ್ಪಲಿ ಸೇವೆ ಮಾಡುತ್ತಿದ್ದಂತೆ ಅಲ್ಲಿಯೇ ಇದ್ದ ಗ್ರಾಮಸ್ಥರು ಯುವಕನ್ನು ಹಿಡಿದು ಧರ್ಮದೇಟು ನೀಡಿದ್ದಾರೆ. ಇನ್ನು ಈ ರೀತಿ ಧರ್ಮದೇಟು ತಿಂದವನನ್ನು ಉಳೇನೂರು ಗ್ರಾಮದ ವ್ಯಕ್ತಿ ಎನ್ನಲಾಗಿದೆ.

ಮದ್ಯದ ಅಮಲಿನಲ್ಲಿದ್ದ ಈತ ಸಂತೆಯಲ್ಲಿ ಮಹಿಳೆ ಜೊತೆ ಅಸಭ್ಯ ವರ್ತನೆ ತೋರಿ ಗ್ರಾಮಸ್ಥರಿಂದ ಹಿಗ್ಗಾ-ಮುಗ್ಗ ಒದೆ ತಿಂದಿದ್ದಾನೆ.


Category: Crime
Post date: 12-10-2121
Kshetra Samachara
PublicNext--633618--node-nid
Subject ಉಡುಪಿ: ಜಿಲ್ಲೆಯಲ್ಲಿ ಇಂದು 17 ಮಂದಿಗೆ ಕೊರೊನಾ- 33 ಡಿಸ್ಚಾರ್ಜ್

ಉಡುಪಿ: ಜಿಲ್ಲೆಯಲ್ಲಿ ಇಂದು 17 ಜನರಿಗೆ ಸೋಂಕು ದೃಢಪಟ್ಟಿದ್ದು, 29 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಚ್ ಆಗಿದ್ದಾರೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 76,541ಕ್ಕೆ ಏರಿಕೆಯಾಗಿದೆ. ಒಟ್ಟು ಡಿಸ್ಚಾರ್ಚ್ ಆದವರ ಸಂಖ್ಯೆ 75,898ಕ್ಕೆ ಏರಿಕೆಯಾಗಿದೆ. ಇನ್ನು ಸೋಂಕಿನಿಂದ ಇಂದು ಒಬ್ಬರು ಸಾವನ್ನಪ್ಪಿದ್ದು, ಈವರೆಗೂ ಒಟ್ಟು 483 ಜನರು ಕೊರೊನಾಗೆ ಬಲಿಯಾಗಿದ್ದಾರೆ. ಜಿಲ್ಲೆಯಲ್ಲಿ 160 ಸಕ್ರಿಯ ಪ್ರಕರಣಗಳಿವೆ.


Category: Health & Fitness, COVID
Post date: 12-10-2121
City: Udupi
Kshetra Samachara
PublicNext--633614--node-nid
Subject ಧಾರವಾಡ: ಜಿಲ್ಲೆಯಲ್ಲಿ ಇಂದು ನಾಲ್ವರಿಗೆ ಕೊರೊನಾ ದೃಢ

ಧಾರವಾಡ: ಜಿಲ್ಲೆಯಲ್ಲಿ ಕೊರೊನಾ ಆತಂಕ ಇಳಿಕೆ ಕಾಣುತ್ತಿದೆ. ಇಂದು ನಾಲ್ವರಿಗೆ ಸೋಂಕು ದೃಢಪಟ್ಟಿದ್ದು, ಒಟ್ಟು ಸೋಂಕಿತರ ಸಂಖ್ಯೆ 60,944ಕ್ಕೆ ಏರಿಕೆಯಾಗಿದೆ.

ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನೀಡಿದ ಮಾಹಿತಿ ಪ್ರಕಾರ, ಡೆಡ್ಲಿ ಸೋಂಕಿನಿಂದ 7 ಜನ ಸುಧಾರಿಸಿಕೊಂಡು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, ಈವರೆಗೂ 59,590 ಜನ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇನ್ನು ಸೋಂಕಿನಿಂದ ಇಂದು ಯಾವುದೇ ಸಾವು ಸಂಭವಿಸಿಲ್ಲ. ಈವರೆಗೂ ಒಟ್ಟು 1,307 ಮಂದಿ ಕೋವಿಡ್‌ಗೆ ಬಲಿಯಾಗಿದ್ದಾರೆ. ಜಿಲ್ಲೆಯಲ್ಲಿ ಸದ್ಯ 45 ಸಕ್ರಿಯ ಪ್ರಕರಣಗಳಿವೆ.


Category: Health & Fitness, COVID
Post date: 12-10-2121
City: Hubballi-Dharwad
PublicNext
PublicNext--633625--node-nid
Subject ಪ್ರಧಾನಿ ಸಲಹೆಗಾರರಾಗಿ ಅಮಿತ್ ಖರೆ ನೇಮಕ

ನವದೆಹಲಿ: ದೇಶದ ಪ್ರಧಾನಿ ನರೇಂದ್ರ ಮೋದಿ ಅವರ ಸಲಹೆಗಾರರಾಗಿ ನಿವೃತ್ತ ಐಎಎಸ್ ಅಧಿಕಾರಿ ಅಮಿತ್ ಖರೆ ನೇಮಕಗೊಂಡಿದ್ದಾರೆ.
ಅಮಿತ್ ಖರೆ 1985ನೇ ಬ್ಯಾಚ್ ನ ಐಎಎಸ್ ಅಧಿಕಾರಿ, ಮಾಹಿತಿ ಮತ್ತು ಪ್ರಸಾರ ಇಲಾಖೆಯ ಮಾಜಿ ಕಾರ್ಯದರ್ಶಿಯಾಗಿ,ಉನ್ನತ ಶಿಕ್ಷಣ ಕಾರ್ಯದರ್ಶಿಯಾಗಿ ಕರ್ತವ್ಯ ನಿರ್ವಹಿಸಿ ಸೆಪ್ಟೆಂಬರ್ 30ರಂದು ನಿವೃತ್ತರಾಗಿದ್ದರು.

ಇದೀಗ ಪ್ರಧಾನಿ ನರೇಂದ್ರ ಮೋದಿಯವರ ಸಲಹೆಗಾರರಾಗಿ ನೇಮಕವಾಗಿದ್ದಾರೆ. ಕ್ಯಾಬಿನೆಟ್ ನ ನೇಮಕಾತಿ ಸಮಿತಿ ಅನುಮೋದನೆ ಮೆರೆಗೆ ಅಮಿತ್ ಖರೆ ಪ್ರಧಾನಿ ಸಲಹೆಗಾರರಾಗಿ ಪ್ರಧಾನಮಂತ್ರಿ ಕಚೇರಿಯಲ್ಲಿ ಕಾರ್ಯ ನಿರ್ವಹಿಸುತ್ತಾರೆ. ಭಾರತ ಸರ್ಕಾರದ ಕಾರ್ಯದರ್ಶಿಯ ಶ್ರೇಣಿ...
Category: Government
Post date: 12-10-2121

PublicNext
PublicNext--633617--node-nid
Subject ಉಗುಳಿದ ಕಲೆ ತೆಗೆಯಲು ವರ್ಷಕ್ಕೆ 1,200 ಕೋಟಿ ಖರ್ಚು

ಹೊಸದಿಲ್ಲಿ: ಸಾರ್ವಜನಿಕ ಸ್ಥಳಗಳಲ್ಲಿ ಉಗುಳಬಾರದು ಎಂದು ಎಲ್ಲಿ ನಾಮಫಲಕಗಳನ್ನು ಹಾಕಿದರು ನಮ್ಮ ದೇಶ ಜನ ಮಾತ್ರ ಪಾನ್, ಗುಟ್ಕಾ ತಿಂದು ಎಲ್ಲೆಂದರಲ್ಲಿ ಉಗುಳುವುದನ್ನು ಮಾತ್ರ ನಿಲ್ಲಿಸುತ್ತಿಲ್ಲ. ಇನ್ನು ಶಾಕಿಂಗ್ ಸಂಗತಿ ಎಂದರೆ ಈ ರೀತಿ ರೈಲು ನಿಲ್ದಾಣಗಳಲ್ಲಿ ಉಗುಳಿದ ಕಲೆ ತೆಗೆಯಲು ರೈಲ್ವೆ ಇಲಾಖೆ ಪ್ರತಿ ವರ್ಷ ರೂ. 1,200 ಕೋಟಿಯಷ್ಟು ವ್ಯಯಿಸುತ್ತಿದೆ. ಇದರ ಜತೆಗೆ ಸ್ವಚ್ಛತೆಗೆ ಸಾಕಷ್ಟು ನೀರು ಕೂಡ ಬಳಕೆಯಾಗುತ್ತಿದೆ ಎಂದು ಖಾಸಗಿ ಮಾಧ್ಯಮವೊಂದು ವರದಿ ಮಾಡಿದೆ.

ಜನರು ನಿಲ್ದಾಣಗಳಲ್ಲಿ ಉಗುಳುವುದನ್ನು ತಡೆಯಲು ರೈಲು ನಿಲ್ದಾಣಗಳಲ್ಲಿ ಪರಿಸರ ಸ್ನೇಹಿ ಸ್ಪಿಟ್ಟೂನ್ ಪೌಚ್ ಒದಗಿಸುವ ವೆಂಡಿಂಗ್...
Category: Infrastructure
Post date: 12-10-2121

Kshetra Samachara

Subject ಮಂಗಳೂರು: ಮಕ್ಕಳನ್ನು ಕರೆದೊಯ್ಯಲು ಬೆಂಗಳೂರಿನಿಂದ ಧಾವಿಸಿದ ಪೋಷಕರು

ಮಂಗಳೂರು: ಬೆಂಗಳೂರಿನಿಂದ ನಾಪತ್ತೆಯಾಗಿ ಮಂಗಳೂರಿನಲ್ಲಿ ಪತ್ತೆಯಾಗಿರುವ ನಾಲ್ವರು ಮಕ್ಕಳ ಪೋಷಕರು ಇದೀಗ ತಾನೇ ಪಾಂಡೇಶ್ವರ ಪೊಲೀಸ್ ಠಾಣೆಗೆ ಆಗಮಿಸಿದ್ದಾರೆ.

ಸೋಲದೇವನ ಹಳ್ಳಿ ಠಾಣೆಯ ಪೊಲೀಸ್ ಇನ್ ಸ್ಪೆಕ್ಟರ್ ಹಾಗೂ ಸಿಬ್ಬಂದಿಯೊಂದಿಗೆ ಆಗಮಿಸಿರುವ ಪೋಷಕರು ಮಕ್ಕಳನ್ನು ಕರೆದೊಯ್ಯಲು ಬಂದಿದ್ದಾರೆ‌. ಸಂಜೆ 6.30ರ ಸುಮಾರಿಗೆ ಪಾಂಡೇಶ್ವರ ಠಾಣೆಗೆ ಆಗಮಿಸಿದ್ದಾರೆ.

ಪಾಂಡೇಶ್ವರ ಪೊಲೀಸ್ ಇನ್ ಸ್ಪೆಕ್ಟರ್ ರೇವತಿಯವರ ಜೊತೆಗೆ ಪೋಷಕರು ಮಾತುಕತೆ ನಡೆಸುತ್ತಿದ್ದಾರೆ. ಬಳಿಕ ಮಕ್ಕಳನ್ನು ಪೋಷಕರ ಸುಪರ್ದಿಗೆ ನೀಡಲಾಗುತ್ತೆ.ಅಮೃತ ವರ್ಷಿಣಿಯ ಅಣ್ಣ ಹಾಗೂ ರಾಯನ್ ಸಿದ್ಧಾಂತ್ ತಂದೆ ಮಾತ್ರ ಆಗಮಿಸಿದ್ದಾರೆ...
Category: Crime
Post date: 12-10-2121
City: Bangalore

Pages