Public News
News Subject:
ಸೇನಾ ಆಸ್ಪತ್ರೆಗೆ ಭಾರಿ ಮೊತ್ತ ದೇಣಿಗೆ ನೀಡಿದ ರಾಷ್ಟ್ರಪತಿ
Top News Rank:
1
Is Sensitive:
No
Is Special NEWS:
0
Send Notification:
0
Body:
ನವದೆಹಲಿ : ಕಾರ್ಗಿಲ್ ಯುದ್ಧದಲ್ಲಿ ಹೋರಾಡಿದ ಸೈನಿಕರ ಗೌರವಾರ್ಥ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಇಲ್ಲಿನ ಸೇನಾ ಆಸ್ಪತ್ರೆಗೆ ಭಾನುವಾರ ₹20 ಲಕ್ಷ ದೇಣಿಗೆ ನೀಡಿದ್ದಾರೆ.
ಕೋವಿಡ್ ಚಿಕಿತ್ಸೆಗಾಗಿ ಬೇಕಾಗಿರುವ ಉಪಕರಣಗಳ ಖರೀದಿಗಾಗಿ ರಾಷ್ಟ್ರಪತಿ ಅವರು ಆಸ್ಪತ್ರೆಗೆ ಹಣ ನೀಡಿದ್ದಾರೆ ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.
ಭಾನುವಾರ ದೇಶದೆಲ್ಲೆಡೆ ಕಾರ್ಗಿಲ್ ವಿಜಯೋತ್ಸವವನ್ನು ಆಚರಿಸಲಾಯಿತು. ರಾಷ್ಟ್ರಪತಿ ಭವನದ ಖರ್ಚಿನಲ್ಲಿ ಉಳಿತಾಯ ಮಾಡುವ ಮೂಲಕ ರಾಷ್ಟ್ರಪತಿ ಅವರು ಸೇನಾ ಆಸ್ಪತ್ರೆಗೆ 20 ಲಕ್ಷ ಹಣ ನೀಡಿದ್ದಾರೆ.
ರಾಷ್ಟ್ರಪತಿ ಅವರು ಈ ಮೂಲಕ ಸೈನಿಕರಿಗೆ ಸುರಕ್ಷಿತ, ಅನೂಕೂಲಕರ ವಾತಾವರಣ ಒದಗಿಸಲು ಸಣ್ಣ ಪ್ರಯತ್ನ ಮಾಡಿದ್ದಾರೆ.
ಇದರಿಂದ ಸ್ಫೂರ್ತಿ ಪಡೆದು ಜನರು, ಸಂಸ್ಥೆಗಳು ಖರ್ಚನ್ನು ಕಡಿಮೆಗೊಳಿಸಿ ಹಣ ಉಳಿತಾಯ ಮಾಡಬೇಕು. ಕೋವಿಡ್ ವಾರಿಯರ್ಸ್ ಜೊತೆ ನಿಲ್ಲಬೇಕು ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.
Upload Image:

Category:
Health & Fitness
Reach Count:
83975
State:
Karnataka
In Organic Like Count:
0