Kshetra Samachara

Local News Subject: 
ಹುಬ್ಬಳ್ಳಿ: ಗುಣಮಟ್ದ ಸೇವೆಗಾಗಿ ಸುಚಿರಾಯು ಆಸ್ಪತ್ರೆಗೆ ಅಕ್ರಿಡೇಷನ್ ಗೌರವ : ವೈದ್ಯಕೀಯ ಸೇವೆಯಲ್ಲಿ ಸಾಧನೆ
City: 
Hubballi-Dharwad
Video Thumbnail: 
PublicNext--633469--node-nid
Category: 
Health & Fitness
Science and Technology
Body: 

ಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿ ಸಾಧನೆ ವಿಷಯದಲ್ಲಿ ಒಂದಿಲ್ಲೊಂದು ರೀತಿಯಲ್ಲಿ ಸುದ್ಧಿಯಲ್ಲಿ ಇದ್ದೇ ಇರುತ್ತದೆ. ಇನ್ನೂ ಹುಬ್ಬಳ್ಳಿಯ ಕೀರ್ತಿ ಅಂದರೆ ಅದು ರಾಷ್ಟ್ರಕ್ಕೆ ಮಾತ್ರವಲ್ಲದೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹವಾ ಮಾಡಿದೆ. ಹೀಗೆ ಹುಬ್ಬಳ್ಳಿಯ ಸುಚಿರಾಯು ಆಸ್ಪತ್ರೆಯು ಉತ್ಕೃಷ್ಟ ಗುಣಮಟ್ಟದ ಸೇವೆಯಿಂದ ದಾಖಲೆಯೊಂದನ್ನು ಬರೆದಿದೆ.

ಹೌದು.. ರೋಗಿಗಳ ಸುರಕ್ಷತೆ, ಅತ್ಯುತ್ತಮ ಗುಣಮಟ್ಟದ ಸೌಲಭ್ಯದಲ್ಲಿ ಎನ್‌ಎಬಿಎಚ್(ನ್ಯಾಷನಲ್ ಅಕ್ರಿಡೇಷನ್ ಬೋರ್ಡ್ ಫಾರ್ ಹಾಸ್ಪಿಟಲ್ & ಹೆಲ್ತ್ ಕೇರ್ ಪ್ರೊವೈಡರ್ಸ್)ನ ಅಂತಿಮ ಘಟ್ಟದ ಮಾನ್ಯತಾ ಪ್ರಮಾಣ ಪತ್ರ ಪಡೆದ ಉತ್ತರ ಕರ್ನಾಟಕದ ಪ್ರಥಮ ಆಸ್ಪತ್ರೆ ಎಂಬ ಹೆಗ್ಗಳಿಕೆಗೆ ಸುಚಿರಾಯು ಆಸ್ಪತ್ರೆ ಪಾತ್ರವಾಗಿದೆ.

ಈ ಕುರಿತು ಮಾಹಿತಿ ಹಂಚಿಕೊಂಡ ಆಸ್ಪತ್ರೆಯ ಮ್ಯಾನೇಜಿಂಗ್ ಡೈರೆಕ್ಟರ್ ಹಾಗೂ ಮೆದುಳು ಮತ್ತು ನರರೋಗ ತಜ್ಞ ಡಾ. ರಾಜೇಂದ್ರ. ಐ. ದುಗ್ಗಾಣಿ, ಆಸ್ಪತ್ರೆಯ ಉತ್ಕೃಷ್ಟ ಸೌಲಭ್ಯಗಳ ಕುರಿತು 3 ಮೂರು ವರ್ಷಗಳ ಕಾಲ ನಿರಂತರ ಅಧ್ಯಯನ ಮತ್ತು ಆಸ್ಪತ್ರೆಗೆ ಸತತ 12 ಬಾರಿ ಭೇಟಿ ನೀಡಿ ಇಲ್ಲಿಯ ಸೌಲಭ್ಯಗಳ ಕುರಿತು ಪರಿಶೋಧನೆ ನಡೆಸಿ ಈ ಆಸ್ಪತ್ರೆಗೆ ಅಂತಿಮ ಘಟ್ಟದ ಮಾನ್ಯತಾ ಪ್ರಮಾಣವನ್ನು ಎನ್‌ಎಬಿಎಚ್ ನೀಡಿದೆ. ಈ ಮೂಲಕ ಡಬ್ಲೂಎಚ್ಓ ಮಾರ್ಗಸೂಚಿ ಅನ್ವಯ ಗುಣಮಟ್ಟವನ್ನು ಕಾಯ್ದುಕೊಂಡು ರೋಗಿಗಳ ಬಗ್ಗೆ ಕಾಳಜಿ ವಹಿಸುವ ರಾಜ್ಯದ 70ನೇ ಆಸ್ಪತ್ರೆ ಇದಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಎನ್‌ಎಬಿಎಚ್ ಎಂಟ್ರಿ, ಮಿಡ್ ಹಾಗೂ ಪೈನಲ್ ಎಂಬ ಮೂರು ಹಂತದಲ್ಲಿ ಪ್ರಮಾಣ ಪತ್ರವನ್ನು ನೀಡುತ್ತದೆ. ಆಸ್ಪತ್ರೆಯ ಬೆಡ್ ಸೌಲಭ್ಯ, ಗುಣಮಟ್ಟದ ಔಷಧಿ, ರೋಗಿಗಳ ಹೆಲ್ತ್ ಕೇರ್, ಆಸ್ಪತ್ರೆಯಲ್ಲಿ ಇತರೆ ಸೌಲಭ್ಯಗಳನ್ನು ಇದರಲ್ಲಿ ಪರಿಗಣಿಸಲಾಗುತ್ತದೆ. ಈ ಎಲ್ಲ ಸೌಲಭ್ಯಗಳಲ್ಲಿಯೂ ಗುಣಮಟ್ಟದ ಕಾಯ್ದುಕೊಂಡ ಆಸ್ಪತ್ರೆ ಎಂದು ಪರಿಗಣಿಸಿ ಈ ಪ್ರಮಾಣಪತ್ರವನ್ನು ನೀಡಲಾಗುತ್ತದೆ. ಸುಚಿರಾಯು ಆಸ್ಪತ್ರೆಯು ಪ್ರಥಮ ಪ್ರಯತ್ನದಲ್ಲಿಯೇ ಅಂತಿಮ ಘಟ್ಟದ(ಫೈನಲ್) ಮಾನ್ಯತಾ ಪ್ರಮಾಣ ಪತ್ರ ಪಡೆದುಕೊಂಡಿದೆ ಎಂದರು.
ಪ್ರತಿ ತಿಂಗಳು ಅಥವಾ ಮೂರು ತಿಂಗಳೊಳಗಾಗಿ ಎನ್‌ಎಬಿಎಚ್ ಆಸ್ಪತ್ರೆಯ ಸೌಲಭ್ಯಗಳ ಪರಿಶೋಧನೆ ನಡೆಸುತ್ತದೆ. ಒಂದು ವೇಳೆ ಈ ಪರಿಶೋಧನೆಯಲ್ಲಿ ಗುಣಮಟ್ಟ ಕಾಯ್ದುಕೊಳ್ಳದ ಅಂಶಗಳು ಕಂಡುಬಂದರೆ ಮಾನ್ಯತೆಯನ್ನು ರದ್ದುಗೊಳಿಸುತ್ತದೆ. ಆದರೆ, ಸುಚಿರಾಯು ಆಸ್ಪತ್ರೆಯು ಗುಣಮಟ್ಟದಲ್ಲಿ ಇದುವರೆಗೂ ಯಾವುದೇ ರಾಜೀ ಮಾಡಿಕೊಂಡಿಲ್ಲ. ರೋಗಿಗಳಿಗೆ ಅಗತ್ಯ ಸೌಲಭ್ಯಗಳನ್ನು ನಿರಂತರವಾಗಿ ನೀಡುತ್ತಾ ಬಂದಿದೆ. ಅಲ್ಲದೇ, ಸರಕಾರ ಮತ್ತು ಡಬ್ಲೂಎಚ್ಒ ನಿಯಮಾನುಸಾರ ಮತ್ತಷ್ಟು ಗುಣಮಟ್ಟವನ್ನು ಹೆಚ್ಚಿಸುತ್ತಾ ಸಾಗಿದೆ.

ಎನ್‌ಎಬಿಎಚ್ ಮಾನ್ಯತಾ ಪತ್ರ ಹೊಂದಿದ್ದರಿಂದ ಆಸ್ಪತ್ರೆಯಲ್ಲಿ ಅಂಗಾಂಗ ಕಸಿ ನಡೆಸಲು ಸುಲಭವಾದಂತಾಗಿದೆ. ಅಲ್ಲದೇ, ಆರ್ಮಿ, ಸಿಆರ್ಪಿಎಫ್, ಬಿಎಸ್ಎಫ್ ಸೇರಿದಂತೆ ದೇಶದ ರಕ್ಷಣಾ ಸಿಬ್ಬಂದಿಯು ಈ ಆಸ್ಪತ್ರೆಯಲ್ಲಿ ಎಲ್ಲ ಸೌಲಭ್ಯಗಳೊಂದಿಗೆ ಚಿಕಿತ್ಸೆ ಪಡೆದುಕೊಳ್ಳಲು ಅನುಕೂಲವಾಗಲಿದೆ. ಈ ಮಾನ್ಯತಾ ಪತ್ರ ದೊರೆತಿರುವುದು ಆಸ್ಪತ್ರೆಯ ಬಲ ಹೆಚ್ಚಿಸಿದೆ.

Reach Count: 
101114
Show Detail Screen Advertisement: 
Yes