Error message

  • Notice: Constant PUBLIC_NEXT_APP_USER_TRENDING_VIDEOS_PARAMETER_DURATION_IN_SECONDS already defined in require_once() (line 662 of /var/www/html/electreps/sites/all/modules/public_next_mobile_json_api/inc/public_next_mobile_json_api_constants.inc).
  • Notice: Constant TRENDING_VIDEO_MIN_LENGTH_IN_SECS already defined in require_once() (line 662 of /var/www/html/electreps/sites/all/modules/public_next_mobile_json_api/inc/public_next_mobile_json_api_constants.inc).

Kshetra Samachara

Local News Subject: 
ಇಹಲೋಕ ತ್ಯಜಿಸಿದ ಟ್ರಾಫಿಕ್ ವಾರ್ಡನ್ ಆಗಿ ಕಾರ್ಯನಿರ್ವಹಿಸುತ್ತಿದ್ದ 99 ವಯಸ್ಸಿನ ಜೋ ಗೊನ್ಸಾಲ್ವಿಸ್
City: 
Udupi
Mangalore
Upload Image: 
PublicNext--587826--node-nid
Category: 
Human Stories
Body: 

ಮಂಗಳೂರು: ಶತಕದ ವಯಸ್ಸಿನಂಚಿನಲ್ಲಿಯೂ ಯುವಕರೂ ನಾಚುವಂತೆ ಟ್ರಾಫಿಕ್ ವಾರ್ಡನ್ ಚೀಫ್ ಆಗಿ ಸೇವೆ ಸಲ್ಲಿಸುತ್ತಿದ್ದ ಜೋಸೆಫ್ ಗೊನ್ಸಾಲ್ವಿಸ್(99) ಇಂದು ಇಹಲೋಕ ತ್ಯಜಿಸಿದ್ದಾರೆ. ಕೆಲ ದಿನಗಳಿಂದ ಫಾದರ್ ಮುಲ್ಲರ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಇಂದು ಬೆಳಗ್ಗೆ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ.

ಜೋ ಗೊನ್ಸಾಲ್ವಿಸ್ ಎಂದೇ ಪ್ರಖ್ಯಾತರಾಗಿದ್ದ ಅವರು, ಮಂಗಳೂರು ನಗರದ ಫಳ್ನೀರ್ ನಲ್ಲಿ ವಾಸವಾಗಿದ್ದರು. ಬ್ರಿಟಿಷ್ ಮೂಲದ ಜೆಎಲ್ ಮೋರಿಸನ್ ಕಂಪೆನಿಯಲ್ಲಿ ಮ್ಯಾನೇಜ್‌ಮೆಂಟ್ ಟ್ರೈನಿಯಾಗಿ ಉದ್ಯೋಗಕ್ಕೆ ಸೇರಿದ್ದ ಜೋ ಗೊನ್ಸಾಲ್ವಿಸ್ ಬಳಿಕ ಅದೇ ಕಂಪನಿಯಲ್ಲಿ ಸೇಲ್ಸ್ ಮ್ಯಾನೇಜರ್ ಆಗಿದ್ದರು. ಕೊನೆಗೆ, ಕಂಪನಿಯಲ್ಲಿ ಭಡ್ತಿ ಪಡೆದು ಎಕ್ಸಿಕ್ಯುಟಿವ್ ಡೈರೆಕ್ಟರ್ ಹುದ್ದೆಗೇರಿದ್ದರು. ಆ ಸಂದರ್ಭ ಲಂಡನ್ ನಗರದಲ್ಲೇ ಜೋ ಗೊನ್ಸಾಲ್ವಿಸ್ ನೆಲೆಯಾಗಿದ್ದರು.

ನಿವೃತ್ತಿಯ ಬಳಿಕ ಶಿಕ್ಷಣ ಸಂಸ್ಥೆಗಳು ಮತ್ತು ಚಾರಿಟಿ ಸಂಸ್ಥೆಗಳಲ್ಲಿ ಡೈರೆಕ್ಟರ್ ಆಗಿ ಸೇವೆ ಸಲ್ಲಿಸಿದ ಅವರು ಉತ್ತರ ಅಮೆರಿಕಾದಲ್ಲಿ ಮಂಗಳೂರಿನ ಸಂತ ಅಲೋಸಿಯಸ್ ಅಲ್ಯುಮ್ನಿ ಅಸೋಸಿಯೇಶನ್ ಹೆಸರಲ್ಲಿ ಸಂಘಟನೆಯೊಂದರ ಸ್ಥಾಪಕರಾಗಿದ್ದರು. ಬಳಿಕ ಮಂಗಳೂರಿಗೆ ಆಗಮಿಸಿದ ಅವರು ನಗರದ ಟ್ರಾಫಿಕ್ ಸಮಸ್ಯೆಯನ್ನು ಬಗೆಹರಿಸಲು ಮುಂದಾಗಿ, ಟ್ರಾಫಿಕ್ ಪೊಲೀಸ್ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿದ್ದರು. ಅದರಂತೆ, 2015ರಲ್ಲಿ ಟ್ರಾಫಿಕ್ ವಾರ್ಡನ್ ಸೇವೆ ಆರಂಭಿಸಿದ್ದಲ್ಲದೆ ತಮ್ಮ 94ರ ವಯಸ್ಸಿನಲ್ಲಿ ಚೀಫ್ ವಾರ್ಡನ್ ಆಗಿ ಸೇವೆ ಆರಂಭಿಸಿದ್ದರು.

Reach Count: 
3723
Show Detail Screen Advertisement: 
Yes