Kshetra Samachara
Local News Subject:
ಬಜಪೆ: ಹಾಡುಹಗಲೇ ರಸ್ತೆಯಲ್ಲಿ ಕಾಡುಕೋಣ ಪತ್ತೆ
City:
Udupi
Mangalore
Video Thumbnail:
Category:
Nature
Body:
ಬಜಪೆ: ಹಾಡು ಹಗಲೇ ಕಾಡುಕೋಣ ವೊಂದು ರಸ್ತೆಯಲ್ಲಿ ಸಂಚರಿಸುತ್ತಿದ್ದ ವಾಹನ ಸವಾರರೊಬ್ಬರಿಗೆ ಕಾಣ ಸಿಕ್ಕಿದೆ. ಬಜಪೆಯ ಕತ್ತಲ್ ಸಾರ್ ಸಮೀಪದ ಉಲ್ಯ ಎಂಬಲ್ಲಿ ವಾಹನವೊಂದರಲ್ಲಿ ಹೋಗುತ್ತಿದ್ದಾಗ ಕತ್ತಲ್ ಸಾರ್ ನಿಂದ ಕೊಂಪದವು ಗೋಶಾಲೆಗೆ ಸಾಗುವಂತಹ ಉಳ್ಯ ಎಂಬಲ್ಲಿ ಕಾಡುಕೋಣ ವಾಹನದ ಎದುರು ಭಾಗದಲ್ಲಿ ರಸ್ತೆಯಲ್ಲಿ ನಡೆದುಕೊಂಡು ಹೋಗುದನ್ನು ವಾಹನ ಚಾಲಕರೊಬ್ಬರು ಮೊಬೈಲ್ ನಲ್ಲಿ ಚಿತ್ರಿಕರಿಸಿದ್ದಾರೆ.ಕತ್ತಲ್ ಸಾರ್ ಸಮೀಪದ ಉಲ್ಯ ಪ್ರದೇಶದಲ್ಲಿ ಕಳೆದ ಕೆಲವು ದಿನಗಳಿಂದ ಕಾಡುಕೋಣವೊಂದು ತಿರುಗಾಡುತ್ತಿದ್ದು ಗ್ರಾಮಸ್ಥರನ್ನು ಭಯ ಭೀತರನ್ನಾಗುವಂತೆ ಮಾಡಿದೆ .ಸಂಜೆಯ ವೇಳೆಗೆ ಕೆಲಸ ಬಿಟ್ಟು ರಸ್ತೆಯಲ್ಲಿ ನಡೆದುಕೊಂಡು ಹೋಗಲು ಹಿಂಜರಿಯುವಂತಾಗಿದೆ ಎಂದು ಸ್ಥಳೀಯರೊಬ್ಬರು ತಿಳಿಸಿದ್ದಾರೆ.
Reach Count:
18142
Show Detail Screen Advertisement:
Yes