Error message

  • Notice: Constant PUBLIC_NEXT_APP_USER_TRENDING_VIDEOS_PARAMETER_DURATION_IN_SECONDS already defined in require_once() (line 662 of /var/www/html/electreps/sites/all/modules/public_next_mobile_json_api/inc/public_next_mobile_json_api_constants.inc).
  • Notice: Constant TRENDING_VIDEO_MIN_LENGTH_IN_SECS already defined in require_once() (line 662 of /var/www/html/electreps/sites/all/modules/public_next_mobile_json_api/inc/public_next_mobile_json_api_constants.inc).

Kshetra Samachara

Local News Subject: 
ಉಡುಪಿಯಲ್ಲಿ ಜೂ.14ರಿಂದ ಏನೇನು ಸೇವೆಗಳಿವೆ? ಜಿಲ್ಲಾಧಿಕಾರಿಗಳು ಹೇಳಿದ್ದೇನು?
City: 
Udupi
Mangalore
Video Thumbnail: 
PublicNext-473913-512996-Udupi-Mangalore-Health-and-Fitness-COVID-node
Category: 
Health & Fitness
COVID
Body: 

ಉಡುಪಿ: ಜಿಲ್ಲೆಯಲ್ಲಿ ಕೋವಿಡ್-19 ಹೊಸ ಪ್ರಕರಣಗಳು ಮತ್ತು ಪಾಸಿಟಿವ್ ದರ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತವು ಕೆಲವೊಂದು ನಿಯಮಗಳನ್ನು ಸಡಿಲಗೊಳಿಸಿ ಆದೇಶ ಹೊರಡಿಸಿದೆ.

ಈ ಸಂಬಂಧ ಮಾತನಾಡಿರುವ ಜಿಲ್ಲಾಧಿಕಾರಿ ಜಿ.ಜಗದೀಶ್, ಜಿಲ್ಲೆಯಲ್ಲಿ ಪಾಸಿಟಿವ್ ದರ ಶೇ.6ಕ್ಕೆ ಬಂದು ನಿಂತಿದೆ. ಹೀಗಾಗಿ ಜೂನ್ 14ರಿಂದ ಕೆಲವೊಂದು ರಿಯಾಯಿತಿಗಳಿವೆ. ಬೆಳಿಗ್ಗೆ 6ರಿಂದ 2 ಗಂಟೆ ವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ಇದೆ. ಕಟ್ಟಡ ಸಾಮಗ್ರಿಗಳ ಅಂಗಡಿ ತೆರೆಯಬಹುದು. ಎಲೆಕ್ಟ್ರಾನಿಕ್ಸ್ ಅಂಗಡಿಗಳು ತೆರೆಯಬಹುದು. ಶೇ.50 ಕೆಲಸಗಾರರೊಂದಿಗೆ ಕಾರ್ಖಾನೆಗಳು, ಗೇರು ಬೀಜ ಫ್ಯಾಕ್ಟರಿಗಳು ತೆರೆಯಬಹುದು ಎಂದಿದ್ದಾರೆ.

ಜಿಲ್ಲೆಯಲ್ಲಿ‌ ಮದುವೆಗೆ 40 ಜನರಿಗೆ ಅವಕಾಶ ಕಲ್ಪಿಸಲಾಗಿದೆ. ಜನರು ಸಾರ್ವಜನಿಕವಾಗಿ ಗುಂಪುಗೂಡುವಂತಿಲ್ಲ. ವಾಕಿಂಗ್‌ಗೆ ಅವಕಾಶವಿದ್ದು, ಪಾರ್ಕ್ ಕೂಡ 10 ಗಂಟೆವರೆಗೆ ತೆರೆಯಲಿದೆ. ಆದರೆ ಈ ಎಲ್ಲ ಚಟುವಟಿಕೆಗಳನ್ನು ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡುವುದರೊಂದಿಗೆ ನಿರ್ವಹಿಸಬೇಕು ಎಂದು ಹೇಳಿದ್ದಾರೆ.

Reach Count: 
6620