Public News

News Subject: 
ನನ್ನ, ಜಮೀರ್ ದೇಹದಲ್ಲಿ ಹರಿಯುತ್ತಿರೋ ರಕ್ತ ಒಂದೇ: ಸಿದ್ದರಾಮಯ್ಯ
Upload Image: 
PublicNext-473889-512947-Politics-node
Category: 
Politics
Body: 

ಬೆಂಗಳೂರು: ಶಾಸಕ ಜಮೀರ್ ಅಹ್ಮದ್ ಖಾನ್ ಹಾಗೂ ನಮ್ಮ ದೇಹದಲ್ಲಿ ಹರಿಯುತ್ತಿರುವ ರಕ್ತ ಒಂದೇ ಎಂದು ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ಚಾಮರಾಜಪೇಟೆಯಲ್ಲಿ ಪೌರಕಾರ್ಮಿಕರಿಗೆ ಫುಡ್​ ಕಿಟ್ ವಿತರಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ನನ್ನ ಶರೀರದಲ್ಲಿ ಹರಿಯುವ ರಕ್ತವೂ ಒಂದೇ.. ಜಮೀರ್ ಅಹ್ಮದ್ ಖಾನ್ ಅವರ ಶರೀರದಲ್ಲಿ ಹರಿಯುತ್ತಿರೋ ರಕ್ತವೂ ಒಂದೇ. ನಮಗೆ ರಕ್ತ ಬೇಕಾದಾಗ ಅವರ ರಕ್ತ ತಗೊಳ್ತೀವಿ.. ಅವರಿಗೆ ರಕ್ತ ಬೇಕಾದಾಗ ನಾವು ಕೊಡ್ತೇವೆ. ಆಗ ಜಾತಿ, ಧರ್ಮ ಇರಲ್ಲ.. ಆಮೇಲೆ ಜಾತಿ, ಧರ್ಮ ಎಲ್ಲ ಹುಟ್ಟಾಕ್ತಾರೆ ಎಂದರು.

Reach Count: 
128820