Error message

  • Notice: Constant PUBLIC_NEXT_APP_USER_TRENDING_VIDEOS_PARAMETER_DURATION_IN_SECONDS already defined in require_once() (line 662 of /var/www/html/electreps/sites/all/modules/public_next_mobile_json_api/inc/public_next_mobile_json_api_constants.inc).
  • Notice: Constant TRENDING_VIDEO_MIN_LENGTH_IN_SECS already defined in require_once() (line 662 of /var/www/html/electreps/sites/all/modules/public_next_mobile_json_api/inc/public_next_mobile_json_api_constants.inc).

Public News

News Subject: 
ಬಾದಾಮಿ ಐಸ್ ಕ್ಯಾಂಡಿ ಮಾಡುವ ವಿಧಾನ
Category: 
LadiesCorner
Body: 

ಐಸ್ ಕ್ಯಾಂಡಿ! ಸಂಜೆ ಶಾಲೆಯ ಗಂಟೆ ಬಾರಿಸುತ್ತಿದ್ದಂತೆ ತಳ್ಳುಗಾಡಿ ಶಾಲೆಯ ಗೇಟ್ ಎದುರು ಹಾಜರ್! ನಮ್ಮ ಬಾಲ್ಯ ದಿನಗಳಂತೂ ಹೀಗೆ ಇತ್ತು. ಶಾಲೆ ಮುಗಿಸಿ ಬಣ್ಣಬಣ್ಣದ ಕ್ಯಾಂಡಿ ಅಥವಾ ಪೆಪ್ಸಿ ಸವಿಯುತ್ತ ಸ್ನೇಹಿತರೊಂದಿಗೆ ಮಾತನಾಡುತ್ತಾ ಮನೆ ಕಡೆ ಹೆಜ್ಜೆಹಾಕುತ್ತ ಸಾಗುತ್ತಿದ್ದೆವು. ಇಂದಿನ ರೆಸಿಪಿಯಿಂದ ಶಾಲೆಯ ದಿನಗಳು ನೆನಪಾಯಿತು. ಐಸ್ ಕ್ಯಾಂಡಿ ಎನ್ನುವುದು ಎಲ್ಲಾ ಪೀಳಿಗೆಯ ಮಕ್ಕಳಿಗೂ ಇಷ್ಟವಾಗುವುದು. ತಳ್ಳುಗಾಡಿ ಅಥವಾ ಪಾರ್ಲರ್ ನಲ್ಲಿ ಸಿಗುವ ಐಸ್ ಕ್ಯಾಂಡಿಗಳಿಗೆ ಕೃತಕ ಬಣ್ಣ ಸೇರಿಸಿರುವುದರಿಂದ ಮಕ್ಕಳ ಆರೋಗ್ಯಕ್ಕೆ ಅಷ್ಟಾಗಿ ಒಳ್ಳೆಯದಲ್ಲ. ಇವಾಗಂತೂ ಎಲ್ಲರ ಮನೆಯಲ್ಲೂ ಫ್ರಿಡ್ಜ್ ಇದ್ದೇ ಇದೆ. ಹಾಗಾಗಿ ಒಳ್ಳೆಯ ಉಪಾಯವೆಂದರೆ ಐಸ್ ಕ್ಯಾಂಡಿ ಮೌಲ್ಡ್ ಗಳನ್ನು ಖರೀದಿಸಿ ಮನೆಯಲ್ಲಿಯೇ ಮಕ್ಕಳಿಗೆ ಇಷ್ಟವಾಗುವ ಹಾಗೂ ಆರೋಗ್ಯಕರವಾದ ಕ್ಯಾಂಡಿಗಳನ್ನು ತಯಾರಿಸುವುದು. ಇಂದು ನಿಮಗಾಗಿ ನಾನು ಬಾದಾಮಿ ಹಾಗೂ ತೆಂಗಿನತುರಿ ಉಪಯೋಗಿಸಿ ಐಸ್ ಕ್ಯಾಂಡಿ ಸುಲಭವಾಗಿ ಮಾಡುವ ವಿಧಾನವನ್ನು ತಿಳಿಸಿಕೊಡುತ್ತಿದ್ದೇನೆ.

Reach Count: 
40003