Error message

  • Notice: Constant PUBLIC_NEXT_APP_USER_TRENDING_VIDEOS_PARAMETER_DURATION_IN_SECONDS already defined in require_once() (line 662 of /var/www/html/electreps/sites/all/modules/public_next_mobile_json_api/inc/public_next_mobile_json_api_constants.inc).
  • Notice: Constant TRENDING_VIDEO_MIN_LENGTH_IN_SECS already defined in require_once() (line 662 of /var/www/html/electreps/sites/all/modules/public_next_mobile_json_api/inc/public_next_mobile_json_api_constants.inc).

Public News

News Subject: 
ಇಸ್ಲಾಮಿಕ್ ಸ್ಟೇಟ್‌ ಸೇರಿದ್ದ ಕೇರಳದ ನಾಲ್ವರು ಮಹಿಳೆಯರಿಗಿಲ್ಲ ಭಾರತಕ್ಕೆ ಪ್ರವೇಶ
Upload Image: 
PublicNext--512914--node-nid
Category: 
Law and Order
Body: 

ನವದೆಹಲಿ: ಇಸ್ಲಾಮಿಕ್ ಸ್ಟೇಟ್‌ ಸೇರಿದ್ದ ಕೇರಳದ ನಾಲ್ವರು ಮಹಿಳೆಯರಿಗೆ ದೇಶಕ್ಕೆ ಮರಳುವುದಕ್ಕೆ ಅನುಮತಿ ಇಲ್ಲ ಎಂದು ಭಾರತ ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಖೋರಾಸಾನ್ ಪ್ರಾಂತ್ಯದ (ಐಎಸ್‌ಕೆಪಿ) ಇಸ್ಲಾಮಿಕ್ ಸ್ಟೇಟ್ ಸೇರಲು ಸೋನಿಯಾ ಸೆಬಾಸ್ಟಿಯನ್ ಅಲಿಯಾಸ್ ಆಯಿಷಾ, ರಾಫೆಲಾ, ಮೆರಿನ್ ಜಾಕೋಬ್ ಅಲಿಯಾಸ್ ಮರಿಯಮ್ಮ ಮತ್ತು ನಿಮಿಷಾ ಅಲಿಯಾಸ್ ಫಾತಿಮಾ ಇಸಾ 2016-18ರಲ್ಲಿ ಅಫ್ಘಾನಿಸ್ತಾನದ ನಂಗಹಾರ್‌ಗೆ ಪ್ರಯಾಣ ಮಾಡಿದ್ದರು. ಆದರೆ ಅಫ್ಘಾನಿಸ್ತಾನದಲ್ಲಿ ನಡೆದ ದಾಳಿಯೊಂದರಲ್ಲಿ ಈ ನಾಲ್ವರ ಪತಿಯರು ಕೊಲೆಯಾದ್ದರು.

2019ರ ನವೆಂಬರ್ ಮತ್ತು ಡಿಸೆಂಬರ್ ತಿಂಗಳಿನಲ್ಲಿ ಅಫ್ಘಾನಿಸ್ತಾನ ಅಧಿಕಾರಿಗಳ ಮುಂದೆ ಶರಣಾದ ಸಾವಿರಾರು ಇಸ್ಲಾಮಿಕ್ ಸ್ಟೇಟ್ ಹೋರಾಟಗಾರರಲ್ಲಿ ಈ ನಾಲ್ವರು ಮಹಿಳೆಯರೂ ಕೂಡಾ ಇದ್ದರು. ಇದಾದ ಒಂದು ತಿಂಗಳ ನಂತರ, 2019ರ ಡಿಸೆಂಬರ್‌ನಲ್ಲಿ ಕಾಬೂಲ್‌ನಲ್ಲಿರುವ ಭಾರತೀಯ ಭದ್ರತಾ ಸಂಸ್ಥೆಗಳು ಮಹಿಳೆಯರನ್ನು ಅವರ ಮಕ್ಕಳೊಂದಿಗೆ ಸಂದರ್ಶನ ನಡೆಸಿತ್ತು.

ಮಾರ್ಚ್ 2020ರಲ್ಲಿ, ವೆಬ್‌ಸೈಟ್‌ ಒಂದರಲ್ಲಿ ಮೂವರು ಮಹಿಳೆಯರನ್ನು ವಿಚಾರಣೆ ಮಾಡುವ ವಿಡಿಯೋವನ್ನು ಪ್ರಕಟಿಸಲಾಗಿತ್ತು. ಈ ವಿಡಿಯೋದಲ್ಲಿ "ನಾಲ್ವರಿಗೂ ಹಿಂದಿರುಗಲು ಅವಕಾಶ ನೀಡುವ ಬಗ್ಗೆ ಚಿಂತನೆ ನಡೆಸಲಾಗಿತ್ತು. ಆದರೆ ಆ ನಾಲ್ವರ ಸಂದರ್ಶನವನ್ನು ನೋಡಿದಾಗ ಅವರು ಸಂಪೂರ್ಣವಾಗಿ ಆ ಸಿದ್ಧಾಂತಕ್ಕೆ ಬದ್ಧರಾಗಿದ್ದಾರೆ ಎಂದು ತಿಳಿದುಬಂದಿದೆ. ಈ ವಿಚಾರದಲ್ಲಿ ನಾವು ಫ್ರಾನ್ಸ್ ಮಾದರಿಯನ್ನು ಅನುಸರಿಸಬಹುದು ಮತ್ತು ಅಫ್ಘಾನಿಸ್ತಾನ ಅಧಿಕಾರಿಗಳಲ್ಲಿ ಈ ನಾಲ್ವರ ವಿಚಾರಣೆ ನಡೆಸಲು ಕೋರಬಹುದು" ಎಂದು ಅಧಿಕಾರಿಗಳ ಮೂಲಗಳು ತಿಳಿಸಿವೆ ಎಂದು ವರದಿಯಾಗಿದೆ.

Reach Count: 
29143