Error message

  • Notice: Constant PUBLIC_NEXT_APP_USER_TRENDING_VIDEOS_PARAMETER_DURATION_IN_SECONDS already defined in require_once() (line 662 of /var/www/html/electreps/sites/all/modules/public_next_mobile_json_api/inc/public_next_mobile_json_api_constants.inc).
  • Notice: Constant TRENDING_VIDEO_MIN_LENGTH_IN_SECS already defined in require_once() (line 662 of /var/www/html/electreps/sites/all/modules/public_next_mobile_json_api/inc/public_next_mobile_json_api_constants.inc).

Public News

News Subject: 
ಪತಿಯನ್ನೇ ಕೊಂದು ಎಣ್ಣೆ ಹಾಕಿ ಮರ್ಮಾಂಗ ಫ್ರೈ ಮಾಡಿದ ಪತ್ನಿ.!
Upload Image: 
PublicNext--512858--node-nid
Category: 
Crime
Body: 

ಬ್ರೆಸಿಲಿಯಾ: ಮಹಿಳೆಯೊಬ್ಬಳು ಪತಿಯನ್ನೇ ಕೊಂದು ಎಣ್ಣೆ ಹಾಕಿ ಮರ್ಮಾಂಗ ಫ್ರೈ ಮಾಡಿದ ಅಮಾನವೀಯ ಘಟನೆ ಬ್ರೆಜಿಲ್​ನ ಸಾವೊ ಗೊನ್ಕಾಲೊ ನಗರದಲ್ಲಿ ನಡೆದಿದೆ.

ಕ್ರಿಸ್ಟಿನಾ ರೊಡ್ರಿಗಸ್ ಕೊಲೆಗೈದ ಮಹಿಳೆ. ಆ್ಯಂಡ್ರೆ ಕೊಲೆಯಾದ ಪತಿ. ಈ ದಂಪತಿಗೆ ಎಂಟು ವರ್ಷದ ಮಗ ಹಾಗೂ ಐದು ವರ್ಷದ ಮಗಳಿದ್ದಾಳೆ. ಆದರೆ ದಂಪತಿ ನಡುವೆ ಸಾಕಷ್ಟು ಭಿನ್ನಾಭಿಪ್ರಾಯಗಳು ಇದ್ದಿದ್ದರಿಂದಾಗಿ ಮದುವೆಯಾಗಿ ಹತ್ತು ವರ್ಷಗಳಲ್ಲಿ ಅವರು ಬೇರೆಯಾಗಿದ್ದರು. ಬಳಿಕ ಒಂದಾಗಿದ್ದರೂ ಅವರಿಬ್ಬರ ನಡುವೆ ಸದಾ ಒಂದಿಲ್ಲೊಂದು ಜಗಳ ಆಗುತ್ತಲೇ ಇರುತ್ತಿತ್ತು ಎನ್ನಲಾಗಿದೆ.

ಇತ್ತೀಚೆಗಷ್ಟೇ ದಂಪತಿ ನಡುವೆ ಜಗಳವಾಗಿದ್ದು, ಕ್ರಿಸ್ಟಿನಾ ಬೆಳಗ್ಗೆ 4 ಗಂಟೆಗೆ ಆ್ಯಂಡ್ರೆಯ ಕೊಲೆ ಮಾಡಿದ್ದಾಳೆ. ಬಳಿಕ ಆತನ ಮರ್ಮಾಂಗವನ್ನು ಕತ್ತರಿಸಿ, ಅದಕ್ಕೆ ಒಂದಿಷ್ಟು ಎಣ್ಣೆ ಹಾಕಿ ಫ್ರೈ ಮಾಡಿದ್ದಾಳೆ. ಈ ಬಗ್ಗೆ ಮಾಹಿತಿ ಸಿಗುತ್ತಿದ್ದಂತೆ ಮನೆಯ ಮೇಲೆ ದಾಳಿ ನಡೆಸಿದ ಪೊಲೀಸರು ಆಕೆಯನ್ನು ಬಂಧಿಸಿದ್ದಾರೆ.

ಕೋರ್ಟ್‌ಗೆ ಕ್ರಿಸ್ಟಿನಾ ಪರ ವಕೀಲರು ನೀಡಿದ ಮಾಹಿತಿ ಪ್ರಕಾರ, "ಕ್ರಿಸ್ಟಿನಾಳಿಗೆ ಆ್ಯಂಡ್ರೆ ಹಿಂಸೆ ಕೊಡುತ್ತಿದ್ದ. ವಿಚ್ಚೇಧನ ಪಡೆಯವುದಕ್ಕೂ ಬಿಟ್ಟಿರಲಿಲ್ಲ. ಬೇರೆಯವರೊಂದಿಗೆ ನೀನು ಸುಖವಾಗಿ ಇರಲಾರದಂತೆ ಮಾಡುತ್ತೇನೆ ಎಂದು ಬೆದರಿಕೆ ಹಾಕುತ್ತಿದ್ದ. ಹಾಗಾಗಿ ಆಕೆ ತನ್ನ ಪ್ರಾಣರಕ್ಷಣೆಗಾಗಿ ಈ ಕೊಲೆ ಮಾಡಿದ್ದಾಳೆ" ಎಂದು ತಿಳಿಸಿದ್ದಾರೆ. ಈ ಪ್ರಕರಣವನ್ನು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Reach Count: 
53398