Error message

  • Notice: Constant PUBLIC_NEXT_APP_USER_TRENDING_VIDEOS_PARAMETER_DURATION_IN_SECONDS already defined in require_once() (line 662 of /var/www/html/electreps/sites/all/modules/public_next_mobile_json_api/inc/public_next_mobile_json_api_constants.inc).
  • Notice: Constant TRENDING_VIDEO_MIN_LENGTH_IN_SECS already defined in require_once() (line 662 of /var/www/html/electreps/sites/all/modules/public_next_mobile_json_api/inc/public_next_mobile_json_api_constants.inc).

Public News

News Subject: 
ರಾಜ್ಯದ ಅತ್ಯಂತ ಹಿರಿಯ ಡಿಟೆಕ್ಟಿವ್‌ ಪೊಲೀಸ್ ಡಾಗ್ ರ‍್ಯಾಂಬೋ ಡಾಗ್ ನಿಧನ ಸರಕಾರ ಗೌರವದಿಂದ ಅಂತ್ಯಕ್ರಿಯೆ.!
Video Thumbnail: 
PublicNext--512824--node-nid
Category: 
Human Stories
Body: 

ಬೆಳಗಾವಿ: ರಾಜ್ಯಮಟ್ಟದಲ್ಲಿ ಪೊಲೀಸರ ಇಲಾಖೆಯಲ್ಲಿ ತನ್ನ ಚುರುಕು, ಚಾಣಾಕ್ಷತನ, ಮತ್ತು ಕಳ್ಳರ ಇರುವ ಜಾಡನ್ನು ವಾಸನೆಯ ಮೇಲೆ ಅವರನ್ನು ಹಿಡಿದು ಹೆಡಮುರಿ ಕಟ್ಟಲು ತನ್ನದೆ ಆದ ಮಹತ್ವದ ಪಾತ್ರ ಹೊಂದಿದ್ದ ಬೆಳಗಾವಿ ನಗರ ಪೊಲೀಸ್ ಶ್ವಾನ ಧಳದಲ್ಲಿದ್ದು ರ‍್ಯಾಂಬೋ ಶ್ವಾನ ಇಂದು ಬೆಳಗಾವಿಯಲ್ಲಿ ನಿಧನವಾಗಿದೆ.

ಬೆಳಗಾವಿ ಅಷ್ಟಲ್ಲದೇ ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ಅಪರಾಧದ ಕೃತ್ಯಗಳಲ್ಲಿ ತೊಡಗಿದವರನ್ನು, ಕೊಲೆ, ದರೋಡೆ ಮಾಡಿದವರ ಸುಳಿವು ನೀಡುವಲ್ಲಿ ಪ್ರಮುಖ ಪಾತ್ರ ರ್ಯಾಂಬೋ ವಹಿಸಿತ್ತು. 2019 ಅಕ್ಟೋಬರ್ 2 ರಂದು ಜನಸಿದ್ದ ರ‍್ಯಾಂಬೋ ಬೆಂಗಳೂರಿನ ಆಡಗೋಡಿ ಕ್ರೈಮ್ ಡಿಟೆಕ್ಟಿವ್‌ ವಿಭಾಗದಲ್ಲಿ ಪೊಲೀಸರ ತರಬೇತಿ ಪಡೆದು ಸುರ್ದಿರ್ಘ ಹನ್ನೆರಡು ವರ್ಷಗಳ ಕಾಲ ಬೆಳಗಾವಿ ನಗರ ಪೊಲೀಸರ ತನಿಖಾಧಿಕಾರಿಗಳಿಗೆ ಅಪರಾಧಿಗಳನ್ನು ಪತ್ತೆ ಹಚ್ಚುವಲ್ಲಿ ಸಹಕಾರಿಯಾಗಿತ್ತು. ಸುಮಾರು ೩೦೦ ಕ್ಕೂ ಹೆಚ್ಚು ಅಪರಾಧ ಪ್ರಕರಣಗಳ ಆರೋಪಿಗಳನ್ನ ಪತ್ತೆ ಹಚ್ಚುವಲ್ಲಿ ತನ್ನದೇ ಆದ ಪಾತ್ರ ವಹಿಸಿದ್ದು ಬೆಳಗಾವಿ ಪೊಲೀಸರ ಹೆಮ್ಮೆಯ ಸಂಕೇತವಾಗಿತ್ತು.

ಇತ್ತಿಚೀಗಷ್ಟೇ ತನ್ನ 12ವರ್ಷದ ಜನ್ಮದಿನವನ್ನು ಆಚರಿಸಿಕೊಂಡಿದ್ದ ರ‍್ಯಾಂಬೋ ಇಂದು ನಿಧಾನವಾಗಿ ಪೊಲೀಸರ ಸರಕಾರ ಗೌರವದೊಂದಿಗೆ, ಪೊಲೀಸರಿಂದ ಮೂರು ಸುತ್ತಿನ ಗುಂಡು ಹಾರಿಸಿ ಪೊಲೀಸರ ಸಕಲ ಗೌರವ ವಂದನೆಗಳೊಂದಿಗೆ ಅಂತ್ಯಕ್ರಿಯೆ ನಡೆಯಿತು. ಇದೆ ವೇಳೆ ಸತತವಾಗಿ ಹನ್ನೆರಡು ವರ್ಷಗಳ ಕಾಲ ಅದರ ಒಡನಾಡಿಯಾಗಿದ್ದ ರ್ಯಾಂಗ್ಲರ್ ಬಿಕ್ಕಿ ಬಿಕ್ಕಿ ಅಳುವ ದೃಶ್ಯಗಳು ಅಲ್ಲಿ ನೆರೆದ ಆರಕ್ಷಕರ ಕಣ್ಣಾಲೆಗಳನ್ನು ತೆವಗೊಳಿಸಿದವು.

ಡಿಸಿಪಿ ವಿಕ್ರಮ ಆಮ್ಟೆ ರ‍್ಯಾಂಬೋ ಅಂತ್ಯಸಂಸ್ಕಾರದ ವೇಳೆ ಪಾಲ್ಗೊಂಡ ಗೌರವ ಸಲ್ಲಿಸಿ ಮೌನಾಚರಣೆ ಮಾಡಿದರು. ಬಳಿಕ ಮಾತ್ನಾಡಿದ ಅವರು ರ‍್ಯಾಂಬೋ ನಮ್ಮೆಲ್ಲರ ಒಡನಾಡಿಯಾಗಿತ್ತು ನಮ್ಮ ಇಲಾಖೆಯಲ್ಲಿ ಅದರ ಪಾತ್ರ ಮಹತ್ವದ್ದು, ಸದಾ ಚಿರಸ್ಮರಣೀಯವಾಗಿದ್ದು ಎಂದು ನೆನದರು.

Reach Count: 
36793