Error message

  • Notice: Constant PUBLIC_NEXT_APP_USER_TRENDING_VIDEOS_PARAMETER_DURATION_IN_SECONDS already defined in require_once() (line 662 of /var/www/html/electreps/sites/all/modules/public_next_mobile_json_api/inc/public_next_mobile_json_api_constants.inc).
  • Notice: Constant TRENDING_VIDEO_MIN_LENGTH_IN_SECS already defined in require_once() (line 662 of /var/www/html/electreps/sites/all/modules/public_next_mobile_json_api/inc/public_next_mobile_json_api_constants.inc).

Kshetra Samachara

Local News Subject: 
ಪಕ್ಷಿಕೆರೆ: ಕೊರೋನಾ ಸಂಕಷ್ಟದಲ್ಲಿರುವ ಬಡವರ ನಿರ್ಲಕ್ಷ ಯಡಿಯೂರಪ್ಪ ಸರಕಾರದ ವಿರುದ್ಧ ಅಭಯಚಂದ್ರ ಆಕ್ರೋಶ
City: 
Udupi
Mangalore
Category: 
Politics
Body: 

ಮುಲ್ಕಿ: ಕೊರೋನಾ ಸಂಕಷ್ಟದಲ್ಲಿರುವ ಗ್ರಾಮ ಗ್ರಾಮಗಳ ಬಡಜನತೆಯ ಬಗ್ಗೆ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರ ಸಂಪೂರ್ಣ ನಿರ್ಲಕ್ಷ್ಯ ವಹಿಸಿದ್ದು ಕೇವಲ ಅಧಿಕಾರಕ್ಕಾಗಿ ಪೈಪೋಟಿ ನಡೆಸುತ್ತಿದ್ದಾರೆ ಎಂದು ಮಾಜಿ ಸಚಿವ ಅಭಯಚಂದ್ರ ಜೈನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ

ಅವರು ಕೆಮ್ರಾಲ್ ಪ್ರಜಾಪ್ರತಿನಿಧಿ ವತಿಯಿಂದ ಗ್ರಾ.ಪಂ.ವ್ಯಾಪ್ತಿಯ ಕೊರೋನಾ ಲಾಕ್ಡೌನ್ ನಿಂದ ಸಂಕಷ್ಟಕ್ಕೀಡಾಗುವ ಹೊಸ ಕಾಡು ಗ್ರಾಮಸ್ಥರಿಗೆ ಅಕ್ಕಿ ಹಾಗೂ ದಿನಸಿ ಸಾಮಗ್ರಿಗಳನ್ನು ವಿತರಿಸಿ ಮಾತನಾಡಿದರು.

ಅವರು ಮಾತನಾಡಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿರುವಾಗ ಬಡವರಿಗೆ ಅನ್ನಭಾಗ್ಯ, ಇಂದಿರಾ ಕ್ಯಾಂಟೀನ್ ಮತ್ತಿತರ ಸವಲತ್ತುಗಳನ್ನು ನೀಡಿದ್ದು ಈಗಿನ ಸರಕಾರ ನಿಲ್ಲಿಸಲು ಹುನ್ನಾರ ನಡೆಸುತ್ತಿದೆ, ಕಳೆದ ಲಾಕ್ಡೌನ್ ದಿನಗಳಲ್ಲಿ ಜಿಲ್ಲೆಯ ಸಂಸದ, ಉಸ್ತುವಾರಿ ಸಚಿವರು ಗ್ರಾಮ ಗ್ರಾಮಗಳಿಗೆ ಭೇಟಿ ನೀಡಿ ಲಾಕ್ಡೌನ್ ಸಂತ್ರಸ್ತರ ಅಹವಾಲು ಸ್ವೀಕರಿಸಲು ವಿಫಲ ರಾಗಿದ್ದಾರೆ.

ಕೇವಲ ಚುನಾವಣೆ ಬರುವಾಗ ಹಿಂದುತ್ವದ ಅಜೆಂಡಾ ಮುಖಾಂತರ ಅಧಿಕಾರ ನಡೆಸುತ್ತಾರೆ. ಆರೋಗ್ಯ ಕೇಂದ್ರಗಳಲ್ಲಿ ತಮ್ಮ ಪಕ್ಷದ ವತಿಯಿಂದ ಲಸಿಕೆ ಕೊಡುತ್ತಿದ್ದಾರೆ ಎಂದು ಬಿಜೆಪಿಯವರು. ಅಪಪ್ರಚಾರ ನಡೆಸುತ್ತಿದ್ದಾರೆ, ಲಸಿಕೆಗೆ ಯಾರಪ್ಪನ ದುಡ್ಡು ಅಲ್ಲ, ನಾವು ಕೊಟ್ಟ ತೆರಿಗೆ ಹಣ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

ಎಲ್ಲರೂ ಲಸಿಕೆ ತೆಗೆದುಕೊಂಡು ಕೊರೋನಾ ಮುಕ್ತ ರಾಷ್ಟ್ರಕ್ಕಾಗಿ ಶ್ರಮಿಸೋಣ ಎಂದರು. ಯುವ ಕಾಂಗ್ರೆಸ್ ನಾಯಕ ಮಿಥುನ್ ರೈ ಮಾತನಾಡಿದರು.

ಈ ಸಂದರ್ಭ ಕೆಪಿಸಿಸಿ ವಕ್ತಾರ ವಸಂತ್ ಬೆರ್ನಾಡ್, ಮುಲ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಧನಂಜಯ ಮಟ್ಟು, ಕೆಪಿಸಿಸಿ ಹಿಂದುಳಿದ ವರ್ಗದ ರಾಜ್ಯ ಕಾರ್ಯದರ್ಶಿ ಪ್ರವೀಣ್ ಬೊಳ್ಳೂರು, ಕೆಮ್ರಾಲ್ ಗ್ರಾಪಂ ಅಧ್ಯಕ್ಷೆ ಲೀಲಾ ಕೃಷ್ಣಪ್ಪ, ಪ್ರಜಾಪ್ರತಿನಿಧಿ ಪಕ್ಷದ ಅಧ್ಯಕ್ಷ ಮಯ್ಯದ್ದಿ ಪಕ್ಷಿಕೆರೆ ಮತ್ತಿತರರು ಉಪಸ್ಥಿತರಿದ್ದರು

Reach Count: 
11526