Error message

  • Notice: Constant PUBLIC_NEXT_APP_USER_TRENDING_VIDEOS_PARAMETER_DURATION_IN_SECONDS already defined in require_once() (line 662 of /var/www/html/electreps/sites/all/modules/public_next_mobile_json_api/inc/public_next_mobile_json_api_constants.inc).
  • Notice: Constant TRENDING_VIDEO_MIN_LENGTH_IN_SECS already defined in require_once() (line 662 of /var/www/html/electreps/sites/all/modules/public_next_mobile_json_api/inc/public_next_mobile_json_api_constants.inc).

Kshetra Samachara

Local News Subject: 
ಹುಬ್ಬಳ್ಳಿ: ಗಾಂಜಾ ಕಿಂಗ್​ಪಿನ್ ತೌಸೀಫ ಬಂಧನ
City: 
Hubballi-Dharwad
Upload Image: 
Body: 

ಆಂಧ್ರಪ್ರದೇಶದಿಂದ ಗಾಂಜಾ ತರಿಸಿಕೊಂಡು ಹುಬ್ಬಳ್ಳಿ- ಧಾರವಾಡ, ಕಾರವಾರ, ಗೋಕರ್ಣ ಓಂ ಬೀಚ್​ಗೆ ಸರಬರಾಜು ಮಾಡುತ್ತಿದ್ದ ಗಾಂಜಾ ಕಿಂಗ್​ಪಿನ್ ನೇಕಾರ ನಗರ ನಿವಾಸಿ ತೌಸೀಫ ಸುರ್ದಜಿ (28) ಹಾಗೂ ಕುಂದಗೋಳ ತಾಲೂಕು ಬೆಟದೂರು ಗ್ರಾಮದ ಮುನಾಫ ಅದಮಸಾಬ ಮುಲ್ಲಾ (57)ನನ್ನು ಬೆಂಡಿಗೇರಿ ಠಾಣೆ ಪೊಲೀಸರು ಗುರುವಾರ ಬಂಧಿಸಿದ್ದಾರೆ.

ಸೆ. 11ರಂದು ರೈಲಿನ ಮೂಲಕ ವಿಶಾಖಪಟ್ಟಣದಿಂದ ಹುಬ್ಬಳ್ಳಿಗೆ ಗಾಂಜಾ ಸರಬರಾಜು ಮಾಡುವ ವೇಳೆ ಆಂಧ್ರ ಮೂಲದ ಮೂವರು ಆರೋಪಿಗಳು ರೆಡ್ ಹ್ಯಾಂಡ್ ಆಗಿ ಪೊಲೀಸರ ಕೈಗೆ ಸಿಕ್ಕಿದ್ದರು. ಅವರಿಂದ ಲಕ್ಷ ರೂ. ಮೌಲ್ಯದ 20 ಕೆಜಿ ಗಾಂಜಾ ವಶಪಡಿಸಿಕೊಳ್ಳಲಾಗಿತ್ತು. ಗಾಂಜಾ ತಂದು ತೌಸೀಫನಿಗೆ ಮಾರಾಟ ಮಾಡಲೆಂದು ಬಂದಿದ್ದಾಗಿ ಬಾಯಿ ಬಿಟ್ಟಿದ್ದರು. ಆ ಹಿನ್ನೆಲೆಯಲ್ಲಿ ತೌಸೀಫನನ್ನು ಬಂಧಿಸಲಾಗಿದೆ. ಮತ್ತೋರ್ವ ಆರೋಪಿ ಹಳೇ ಹುಬ್ಬಳ್ಳಿ ಅರವಿಂದ ನಗರದ ಸರ್ಫರಾಜ ಜಮಾದಾರ ತಲೆಮರೆಸಿಕೊಂಡಿದ್ದಾನೆ ಎಂದು ಬೆಂಡಿಗೇರಿ ಠಾಣೆ ಇನ್ಸ್​ಪೆಕ್ಟರ್ ಸಂತೋಷಕುಮಾರ ತಿಳಿಸಿದ್ದಾರೆ.

ಗಾಂಜಾ ಸಾಮ್ರಾಜ್ಯ ಸ್ಥಾಪಿಸಿದ್ದ: ಮೂರ್ನಾಲ್ಕು ವರ್ಷಗಳಿಂದ ಗಾಂಜಾ ಮಾರಾಟವನ್ನೇ ಕಸುಬಾಗಿಸಿಕೊಂಡಿದ್ದ ತೌಸೀಫ ಸುಲಭವಾಗಿ ಗಾಂಜಾ ಸಾಮ್ರಾಜ್ಯ ಕಟ್ಟಿಕೊಂಡಿದ್ದ. ನಕ್ಸಲೈಟ್ ಪ್ರದೇಶಗಳಲ್ಲಿ ಬೆಳೆಯುವ ಗಾಂಜಾವನ್ನು ತೌಫೀಕ್ ಖರೀದಿಸುತ್ತಿದ್ದ. ಬಳಿಕ ಸ್ಥಳೀಯ ಸಾಗಣೆದಾರರ ಸಹಾಯದಿಂದ ರೈಲಿನಲ್ಲಿ ಹುಬ್ಬಳ್ಳಿಗೆ ತರಿಸಿಕೊಳ್ಳುತ್ತಿದ್ದ. ನಂತರ ಕಾರವಾರ, ಗೋಕರ್ಣದ ಓಂ ಬೀಚ್, ಹುಬ್ಬಳ್ಳಿ- ಧಾರವಾಡ ಅವಳಿ ನಗರ, ಗ್ರಾಮೀಣ ಪ್ರದೇಶಗಳು ಸೇರಿ ಹಲವೆಡೆಗೆ ಕಳುಹಿಸಿ ಕೊಡುತ್ತಿದ್ದ.

ಹೆಚ್ಚು ಬೆಲೆಗೆ ಮಾರಾಟ: ಆಂಧ್ರಪ್ರದೇಶದಿಂದ ಕಡಿಮೆ ಬೆಲೆಗೆ ಗಾಂಜಾ ಖರೀದಿಸುತ್ತಿದ್ದ ತೌಸೀಫ ಕರ್ನಾಟಕದಲ್ಲಿ ಹೆಚ್ಚು ಬೆಲೆಗೆ ಮಾರಾಟ ಮಾಡುತ್ತಿದ್ದ. 2 ಕೆಜಿ ಪಾಕೆಟ್​ಗೆ 15 ಸಾವಿರ ರೂ.ಗೆ ಖರೀದಿಸಿ 30, 40 ಸಾವಿರ ರೂ.ಗೆ ಮಾರಾಟ ಮಾಡುತ್ತಿದ್ದ. 100, 500 ಗ್ರಾಂ ಪಾಕೆಟ್​ಗಳನ್ನಾಗಿ ಮಾಡಿ 500, 1000 ರೂ.ಗೆ ಮಾರಾಟ ಮಾಡುತ್ತಿದ್ದ.

ಕಾಲೇಜು ಹುಡುಗರೇ ಟಾರ್ಗೆಟ್: ಮೆಡಿಕಲ್, ಇಂಜಿನಿಯರಿಂಗ್ ಹಾಗೂ ಪದವಿ ಕಾಲೇಜುಗಳ ನಿರ್ದಿಷ್ಟ ವಿದ್ಯಾರ್ಥಿಗಳಿಗೆ ತೌಸೀಫ ಗಾಂಜಾ ಸರಬರಾಜು ಮಾಡುತ್ತಿದ್ದ. ಮೊದಲು ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದ. ವಿದ್ಯಾರ್ಥಿಗಳು ಗಾಂಜಾ ನಶೆಗೆ ಅಡಿಕ್ಟ್ ಆದ ಬಳಿಕ ಹೆಚ್ಚು ಹಣಕ್ಕೆ ಡಿಮಾಂಡ್ ಮಾಡುತ್ತಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

Reach Count: 
1