Error message

  • Notice: Constant PUBLIC_NEXT_APP_USER_TRENDING_VIDEOS_PARAMETER_DURATION_IN_SECONDS already defined in require_once() (line 662 of /var/www/html/electreps/sites/all/modules/public_next_mobile_json_api/inc/public_next_mobile_json_api_constants.inc).
  • Notice: Constant TRENDING_VIDEO_MIN_LENGTH_IN_SECS already defined in require_once() (line 662 of /var/www/html/electreps/sites/all/modules/public_next_mobile_json_api/inc/public_next_mobile_json_api_constants.inc).

ER NEWS

News Subject: 
ಈ ಸೂಚನೆ ಕಂಡರೆ 'ರಿಸೈನ್‌' ಮಾಡಿಬಿಡಿ
Upload Image: 
Body: 

ನೀವು ಕೆಲಸ ಮಾಡುತ್ತಿರುವ ಕಂಪನಿಯಲ್ಲಿ ಕೆಲಸ ಮುಂದುವರೆಸುವುದು ಉತ್ತಮವಲ್ಲ ಎನ್ನುವ ಸೂಚನೆಗಳು ಇಲ್ಲಿವೆ.

ಈಗಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಒಂದೇ ಕಂಪನಿಗೆ ಅಂಟಿಕೊಂಡೇ ಇರಲು ಯಾರೂ ಬಯಸುವುದಿಲ್ಲ. ಬದಲಾಗುವ ಜಗತ್ತಿಗೆ ತಕ್ಕಂತೆ ಕೆಲಸ ಬದಲಾವಣೆ, ಉನ್ನತ ಹುದ್ದೆಯ ಹುಡುಕಾಟ ಮಾಡುತ್ತಿರಬೇಕಾಗುತ್ತದೆ. ಕೆಲವೊಮ್ಮೆ ನೀವು ಕೆಲಸ ಮಾಡುತ್ತಿರುವ ಹುದ್ದೆಯು ನಿಮ್ಮ ಡ್ರೀಮ್‌ ಜಾಬ್‌ ಆಗದೆ ಇರಬಹುದು. ಅಲ್ಲಿನ ವಾತಾವರಣ ನೀವು ವೃತ್ತಿಯಲ್ಲಿ ಪ್ರಗತಿ ಕಾಣಲು ಮಾರಕವಾಗಿರಬಹುದು. ನೀವು ಕೆಲಸ ಮಾಡುತ್ತಿರುವ ಕಂಪನಿಯಲ್ಲಿ ಈ ಮುಂದಿನ ಸೂಚನೆಗಳು, ಅನುಭವವಾದರೆ ನೀವು ಕೆಲಸ ಬಿಡಲು ಸೂಕ್ತ ಸಮಯವೆಂದು ತಿಳಿದುಕೊಳ್ಳಿರಿ.

* ಉದ್ಯೋಗದಲ್ಲಿ ಪ್ರಗತಿ ಇಲ್ಲದೆ ಇರುವುದು.

ಹಲವು ವರ್ಷಗಳಿಂದ ಒಂದೇ ಹುದ್ದೆಯಲ್ಲಿದ್ದೀರಾ? ಯಾವುದೇ ಬಡ್ತಿ ಅಥವಾ ಪ್ರಮೋಷನ್‌ ದೊರಕಿಲ್ಲವೇ? ಕನಿಷ್ಠ ಕಳೆದ ಮೂರು ವರ್ಷದಿಂದ ಯಾವುದೇ ಪ್ರಮೋಷನ್‌ ದೊರಕಿಲ್ಲವೇ? ಇದಕ್ಕಿಂತಲೂ ಉತ್ತಮ ಅವಕಾಶ ಹುಡುಕಾಟಕ್ಕೆ ಇದು ಸೂಕ್ತ ಸಮಯವಾಗಿದೆ. ನಿಮ್ಮ ಕನಸಿನ ಉನ್ನತ ಹುದ್ದೆ ನೀಡುವ ಕಂಪನಿಗಳ ಹುಡುಕಾಟ ನಡೆಸಿರಿ.

* ಸೋಲುವ ಅನುಭವ ಆಗುತ್ತಿರುವುದು.

ನನಗೆ ಬೇರೆ ಯಾವುದೇ ಆಯ್ಕೆ ಇಲ್ಲ. ಹೀಗಾಗಿ, ಈ ಕೆಲಸ ಮಾಡುತ್ತಿದ್ದೇನೆ ಎನ್ನುವ ಕಾರಣಕ್ಕಾಗಿ ಮಾತ್ರ ಕೆಲಸ ಮಾಡುತ್ತಿದ್ದೀರಾ? ಇದು ಯಾವಾಗಲೂ ನಿಜವಲ್ಲ. ಸರಿಯಾಗಿ ಹುಡುಕಾಟ ನಡೆಸಿದರೆ ನಿಮಗೆ ಇದಕ್ಕಿಂತಲೂ ಉತ್ತಮ ಅವಕಾಶಗಳು ಹೊರಗಡೆ ಕಾಯುತ್ತಿರಬಹುದು. ಸೋತು ಕುಳಿತುಕೊಳ್ಳಬೇಡಿ. ಬದುಕನ್ನು ಸವಾಲಿಗೆ ಒಡ್ಡಿ. ಖಂಡಿತಾ ಒಳ್ಳೆಯದಾಗುತ್ತದೆ.

* ನಿಮಗೆ ಕೆಟ್ಟದೆನಿಸುವುದು

ನಿಮ್ಮ ಬಗ್ಗೆಯೇ ನಿಮಗೆ ಖೇದವೆನಿಸಬಹುದು. ಇದು ನನ್ನ ಸ್ವಂತ ವ್ಯಕ್ತಿತ್ವ ಅಲ್ಲವೆಂಬ ಭಾವನೆ ಮೂಡಬಹುದು. ನಿಮ್ಮ ಕ್ಯಾರೆಕ್ಟರ್‌ ಮರೆತು ಬೇರೆ ಯಾವುದೇ ಮುಖವಾಡ ಧರಿಸಿದಂತೆ ಭಾಸವಾಗಬಹುದು. ಇನ್ನಷ್ಟು ಸಮಯ ಈ ಮುಖವಾಡ ಧರಿಸಿ ಕೆಲಸ ಮಾಡುವಿರಿ. ಕೆಲಸ ಬಿಡಲು ಇದು ಸಹ ಸೂಚನೆಯಾಗಿದೆ. ಬೇರೆ ಅವಕಾಶ ಹುಡುಕಿ. ಹೊಸದಾಗಿ ಬದುಕು ಆರಂಭಿಸಿ.

* ಕಂಪನಿಯ ಹಣಕಾಸು ಸ್ಥಿತಿ

ಕಂಪನಿ ಅಥವಾ ನೀವು ಕೆಲಸ ಮಾಡುವ ವಿಭಾಗದ ಹಣಕಾಸು ಸ್ಥಿತಿ ಚಿಂತಜನಕವಾಗಿದೆ. ಸರಿಯಾಗಿ ವೇತನ ನೀಡುತ್ತಿಲ್ಲ. ಕಂಪನಿಯು ಎಷ್ಟೇ ಪ್ರಯತ್ನಪಟ್ಟರೂ ನಷ್ಟದಿಂದ ಚೇತರಿಸಿಕೊಳ್ಳುತ್ತಿಲ್ಲ. ಇದು ಸಹ ಕೆಲಸ ಬಿಡಲು ಸೂಚನೆಯಾಗಿದೆ. ಕಂಪನಿಯೇ ಕೆಲಸದಿಂದ ನಿಮ್ಮನ್ನು ತೆಗೆಯುವ ಮೊದಲು ನೀವೇ ಬಿಟ್ಟರೆ ಉತ್ತಮ.

* ನಿಮ್ಮ ಶಿಕ್ಷಣಕ್ಕೂ ಮಾಡುವ ಕೆಲಸಕ್ಕೂ ಹೊಂದಾಣಿಕೆಯಾಗದೆ ಇದ್ದರೆ...

ನೀವು ಉನ್ನತ ಶಿಕ್ಷಣ, ಕೌಶಲ ಪಡೆದಿರಬಹುದು. ಆದರೆ, ನೀವು ಕೆಲಸ ಮಾಡುವ ಕಂಪನಿಯಲ್ಲಿ ಅದರ ಅವಶ್ಯಕತೆ ಇಲ್ಲದೆ ಇರಬಹುದು. ನಿಮ್ಮ ಕೌಶಲ ವ್ಯರ್ಥವಾಗುತ್ತಿರಬಹುದು. ಇಂತಹ ಸ್ಥಳದಲ್ಲಿ ಹೆಚ್ಚು ಸಮಯ ಇರಬೇಡಿ. ಒಳ್ಳೆಯ ಅವಕಾಶ ಸಿಕ್ಕರೆ ಜಂಪ್‌ ಮಾಡಿಬಿಡಿ.

* ಸಹೋದ್ಯೋಗಿಗಳು ಅಥವಾ ಬಾಸ್‌ ಅನ್ನು ನೀವು ಇಷ್ಟಪಡದೆ ಇರಬಹುದು. ಕಂಪನಿಯ ಇತರರ ಜೊತೆ ಕೆಲಸ ಮಾಡುವುದು ಕಷ್ಟವಾಗುತ್ತಿರಬಹುದು. ಇಂತಹ ಸಂದರ್ಭದಲ್ಲಿ ನಿಮ್ಮ ಕಡೆಯಿಂದ ತಪ್ಪಾಗಿದ್ದಾರೆ ಗುರುತಿಸಿ ಸರಿಪಡಿಸಿಕೊಳ್ಳಿ. ಇದು ಸರಿಯಾಗುವ ವಿಷಯವಲ್ಲವೆಂದೆನಿಸಿದರೆ ಹೊರಕ್ಕೆ ನಡೆದುಬಿಡಿ.

* ಕೆಲಸದ ಒತ್ತಡದಿಂದ ದೈಹಿಕ ಆರೋಗ್ಯ ಹಾಳಾಗುತ್ತಿದೆಯೇ? ರಾತ್ರಿ ಪಾಳಿ ಮಾಡಿ ಸಣಕಲಾಗಿ ಹೋಗಿದ್ದೀರಾ? ಕುಟುಂಬದ ಜೊತೆ ಕೊಂಚ ಸಮಯವೂ ವಿನಿಯೋಗಿಸಲೂ ಸಾಧ್ಯವಾಗುತ್ತಿಲ್ಲವೇ? ಮನೆಯಲ್ಲಿದ್ದರೂ ಕೆಲಸದ ಒತ್ತಡ ಅತಿಯಾಗಿದೆಯೇ? ಇವು ಸಹ ಕೆಲಸ ಬಿಡಲು ಸೂಕ್ತ ಸೂಚನೆಗಳಾಗಿವೆ.

ಕೆಲಸ ಬಿಟ್ಟುಬಿಡಿ

* ಬೆಳಗ್ಗೆ ಎದ್ದಾಗ 'ಅಯ್ಯೋ, ಆ ಕೆಲಸಕ್ಕೆ ಹೋಗಬೇಕಾ' ಎಂದೆನಿಸುತ್ತದೆಯೇ? ಬೆಳಗ್ಗೆ ಎದ್ದಾಗ ಉದ್ಯೋಗದ ಕುರಿತು ಯಾವುದೇ ಉತ್ಸಾಹ ನಿಮ್ಮಲ್ಲಿ ಮೂಡುತ್ತಿಲ್ಲವೇ?

* ಕೆಲಸದ ಕುರಿತು ಯೋಚನೆ ಮಾಡುವುದೇ ನಿಮಗೆ ಅಸಂತೋಷ ಉಂಟು ಮಾಡುತ್ತಿದೆಯೇ? ಕೆಲಸ ಅತೀವ ಒತ್ತಡ, ಮಾನಸಿಕ ಹಿಂಸೆ ನೀಡುತ್ತಿದೆಯೇ? ನೆಮ್ಮದಿ ಇಲ್ಲದ ಕೆಲಸ ಯಾಕೆಬೇಕು?

* ಕಂಪನಿಯ ಸಂಸ್ಕೃತಿಗೆ ನಾನು ಸೂಕ್ತವಾಗಿಲ್ಲವೆಂಬ ಭಾವನೆ ಬರಬಹುದು. ಕಂಪನಿಯ ಸಂಸ್ಕೃತಿಗೆ ಹೊಂದಿಕೊಳ್ಳಲು ಪ್ರಯತ್ನಿಸಿ. ಸಾಧ್ಯವಾಗದೆ ಇದ್ದರೆ ಹೊರನಡೆಯಬಹುದು.

* ನಿಮ್ಮ ಕೆಲಸದ ದಕ್ಷತೆ ದಿನದಿಂದ ದಿನಕ್ಕೆ ಕಳಪೆಯಾಗುತ್ತಿದೆಯೇ? ಕೆಲಸದಲ್ಲಿ ನಿಮ್ಮ ಉತ್ಪಾದಕತೆಯಲ್ಲಿ ಯಾವುದೇ ಪ್ರಗತಿ ಕಾಣುತ್ತಿಲ್ಲವೇ?

* ಕೆಲಸ ಮತ್ತು ವೈಯಕ್ತಿಕ ಬದುಕಿನ ಸಮತೋಲನ ಹದತಪ್ಪಿದರೆ ಸರಿಪಡಿಸಿಕೊಳ್ಳಿ. ಸರಿಪಡಿಸಿಕೊಳ್ಳಲಾಗದೆ ಇದ್ದರೆ ಕೆಲಸ ಬದಲಾವಣೆ ಸೂಕ್ತ.

* ನಿಮ್ಮ ಕೆಲಸ, ಜವಾಬ್ದಾರಿ ಹೆಚ್ಚಾಗಿದೆ. ಆದರೆ, ವೇತನ ಹೆಚ್ಚಾಗಿಲ್ಲ. ಹೆಚ್ಚಾಗುವ ಲಕ್ಷಣಗಳೂ ಇಲ್ಲ.

* ನಿಮ್ಮಲ್ಲಿರುವ ಐಡಿಯಾವನ್ನು ಕಂಪನಿ ಗಣನೆಗೆ ತೆಗೆದುಕೊಳ್ಳುತ್ತಿಲ್ಲ.

* ಕೆಲಸ ಬೋರಿಂಗ್‌ ಎನಿಸಿದೆ.

Reach Count: 
1