E.g., 26/09/2021
Public News
PublicNext--587253--node-nid
Subject ಕಡಿಮೆ ಹಣಕ್ಕೆ ಆಟೋ ಬಾಡಿಗೆಗೆ ಹೋಗ್ತಿದ್ದ ಕೋಪಕ್ಕೆ ಗೆಳೆಯನನ್ನೇ ಕೊಂದ ಪಾಪಿ

ಹಾಸನ: ತನಗಿಂತ ಕಡಿಮೆ ಹಣಕ್ಕೆ ಆಟೋ ಬಾಡಿಗೆಗೆ ಹೋಗುತ್ತಾನೆ ಎಂಬ ಒಂದೇ ಕಾರಣಕ್ಕೆ ತನ್ನ ಸ್ನೇಹಿತನನ್ನೇ ಕೊಲೆ ಮಾಡಿದ ಆಘಾತಕಾರಿ ಘಟನೆ ಹಾಸನ ಜಿಲ್ಲೆಯಲ್ಲಿ ನಡೆದಿದೆ. ಸದ್ಯ ಪೊಲೀಸರು ಆರೋಪಿಯನ್ನು ಬಂಧಿಸಿ ಜೈಲಿಗೆ ಅಟ್ಟಿದ್ದಾರೆ.

ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಆರೋಪಿ ಪ್ರಸನ್ನ (31)ನನ್ನು ಹಾಸನ ಜಿಲ್ಲೆ ಅರಕಲಗೂಡು ತಾಲೂಕಿನ ಕೊಣನೂರು ಪೊಲೀಸರು ಬಂಧಿಸಿದ್ದಾರೆ. ಆರೋಪಿ ಪ್ರಸನ್ನ ಮಲ್ಲಾಪುರ ಲಕ್ಕೂರು ಅರಣ್ಯ ಪ್ರದೇಶದ ಸ್ನೇಹಿತ ಜಗದೀಶ್ (42)ನನ್ನು ಎರಡು ದಿನದ ಹಿಂದೆ ಹತ್ಯೆಗೈದಿದ್ದಾನೆ. ಜಗದೀಶ್ ಮತ್ತು ಪ್ರಸನ್ನ ಇಬ್ಬರೂ ಗೆಳೆಯರಾಗಿದ್ದು, ಆಪೆ ಆಟೋ ಇಟ್ಟುಕೊಂಡು ಇಬ್ಬರೂ ಪಿರಿಯಾಪಟ್ಟಣ...
Category: Crime
Post date: 29-08-2121

Public News

Subject ಭಿನ್ನವಾಗಿ ರುಚಿಯಾದ ಮಸಾಲೆ ತುಂಬಿದ ಬಾಳೆಕಾಯಿ ಬಜ್ಜಿ

ಸಾಮಾನ್ಯವಾಗಿ ನಾವು ಯಾವುದೇ ತರಕಾರಿಯಿಂದ ಬಜ್ಜಿ ಮಾಡುತ್ತೇವೆ. ಆದರೆ ಇವತ್ತು ನಾವು ಭಿನ್ನವಾಗಿ ರುಚಿಯಾದ ಮಸಾಲೆ ತುಂಬಿದ ಬಾಳೆಕಾಯಿ ಬಜ್ಜಿ ಮಾಡುವುದು ಹೇಗೆ ಅಂತ ತಿಳಿಯೋಣ.


Category: LadiesCorner
Post date: 29-08-2121
Kshetra Samachara

Subject ಹುಬ್ಬಳ್ಳಿ: ಅಭಿವೃದ್ಧಿಗೆ ತಂತ್ರಜ್ಞಾನದ ಸ್ಪರ್ಶ ನೀಡಲು ಮುಂದಾದ ಯುವತಿ ಕಾಂಚನಾ ಮಾಲಗಾರ: ನಿಮ್ಮ ಮತ ವಾರ್ಡ್ ಅಭಿವೃದ್ಧಿಗೆ...!

ಹುಬ್ಬಳ್ಳಿ: ಈ ಯುವತಿ ಸಾಕಷ್ಟು ವಿದ್ಯಾವಂತೆ. BE. M.Tech ಓದಿರುವ ಇವರು ಕೈತುಂಬ ಸಂಬಳ ಬರುವ ಉದ್ಯೋಗ ಮಾಡಿಕೊಂಡು ಹಾಯಾಗಿರಬಹುದಿತ್ತು. ಆದರೆ ಸಮಾಜದಲ್ಲಿ ಹೊಸ ಕ್ರಾಂತಿಯನ್ನು ಉಂಟು ಮಾಡಿ ಎಲ್ಲರ ಭವಿಷ್ಯ ಉಜ್ವಲವಾಗಬೇಕು ಎಂಬ ಛಲ ತೊಟ್ಟು ಈ ನಿರ್ಧಾರಕ್ಕೆ ಬಂದಿದ್ದಾರೆ.

ಸಮಾಜ ಸುಧಾರಣೆಯ ದೃಷ್ಟಿಕೋನ ಹೊಂದಿರುವ ಕಾಂಚನಾ ಅವರು ಪಾಲಿಕೆ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲ್ಲುವ ಮೂಲಕ ನಿಜವಾದ ಅಭಿವೃದ್ಧಿಗೆ ನಾಂದಿ ಹಾಡಲಿದ್ದಾರೆ. ಹಾಗಿದ್ದರೇ ಯಾರು ಆ ಯುವತಿ ಅಂತೀರಾ ಇಲ್ಲಿದೆ ನೋಡಿ ಕಂಪ್ಲಿಟ್ ಡಿಟೈಲ್ಸ್..

ತೊಟ್ಟಿಲನ್ನು ತೂಗುವ ಕೈ ಜಗತ್ತನೇ ಆಳಬಹುದು ಎಂಬುವಂತ ಸಾಕಷ್ಟು ನಿರ್ದರ್ಶನಗಳಿಗೆ...
Category: Politics
Post date: 29-08-2121
City: Hubballi-Dharwad

Kshetra Samachara

Subject ಮಂಗಳೂರು: ಅಲೆಗಳ ಅಬ್ಬರಕ್ಕೆ ದೋಣಿಯಿಂದ ಅಯ ತಪ್ಪಿ ಸಮುದ್ರಕ್ಕೆ ಬಿದ್ದ ಮೀನುಗಾರ,ಐವರ ತಂಡದಿಂದ ರಕ್ಷಣೆ

ಮಂಗಳೂರು: ಮೀನುಗಾರಿಕಾ ದೋಣಿಯಿಂದ ಸಮುದ್ರಕ್ಕೆ ಆಯ ತಪ್ಪಿ ಬಿದ್ದ ಮೀನುಗಾರನನ್ನು ಐವರ ತಂಡ ರಕ್ಷಿಸಿರುವ ಘಟನೆ
ಮಂಗಳೂರಿನ ಉಳ್ಳಾಲ ಅಳಿವೆಬಾಗಿಲು ಸಮೀಪ ನಡೆದಿದೆ.

ನವಾಝ್‌, ರಕ್ಷಿಸಲ್ಪಟ್ಟ ಮೀನುಗಾರ. ಓಷಿಯನ್‌ ಬ್ರೀಝ್‌ ದೋಣಿಯಲ್ಲಿದ್ದ ಉಳಿಯ ನಿವಾಸಿ ಪ್ರೇಮ್‌ ಪ್ರಕಾಶ್‌ ಡಿಸೋಜ, ಅನಿಲ್‌ ಮೊಂತೇರೊ, ಸೂರ್ಯ ಪ್ರಕಾಶ್‌ ಡಿಸೋಜ ಹಾಗೂ ಬೆಂಗ್ರೆ ನಿವಾಸಿ ರಿತೇಶ್‌ ಮತ್ತು ಅಜಿತ್‌ ಎಂಬುವವರು ರಕ್ಷಿಸಿದವರು.

ಬೆಳಗ್ಗೆ ನಾಡದೋಣಿ ಮೀನುಗಾರಿಕೆಯವರು ಸಮುದ್ರದಲ್ಲಿ ಬಲೆ ಹಾಕಿ ವಾಪಸ್ಸಾಗಿದ್ದರು. ಏಡಿ ಸಿಗುವ ಸಮಯವಾಗಿದ್ದರಿಂದಾಗಿ ಬಲೆ ಹಾಕಲಾಗಿತ್ತು. ಬಹುತೇಕ ದೋಣಿಯವರು ಹಾಕಿರುವ ಬಲೆಯನ್ನು...
Category: Human Stories
Post date: 29-08-2121
City: Udupi, Mangalore

Public News
PublicNext-521979-587223-Politics-node
Subject 'ಸತ್ತರೆ ಉಚಿತವಾಗಿ ಶವ ಸಂಸ್ಕಾರ': ಬಿಜೆಪಿ ಪ್ರಣಾಳಿಕೆಗೆ ಬೆಳಗಾವಿ ಜನ ಫುಲ್ ಶಾಕ್.!

ಬೆಳಗಾವಿ: ಕುಂದಾನಗರಿ ಬೆಳಗಾವಿ ಮಹಾನಗರ ಪಾಲಿಕೆ ಚುನಾವಣಾ ಕಾವು ಜೋರಾಗಿದ್ದು, ಸೆಪ್ಟೆಂಬರ್ 3ರಂದು ಮತದಾನ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಮಾಜಿ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಬಿಜೆಪಿ ಪ್ರಣಾಳಿಕೆ ಬಿಡುಗಡೆ ಮಾಡಿದ್ದಾರೆ.

ಬೆಳಗಾವಿ ಮಹಾನಗರಕ್ಕಾಗಿಯೇ ಬಿಜೆಪಿಯಿಂದ ಪ್ರತ್ಯೇಕ ಪ್ರಣಾಳಿಕೆ ಬಿಡುಗಡೆ ಮಾಡಲಾಗಿದ್ದು, 'ಸತ್ತರೆ ಉಚಿತವಾಗಿ ಶವ ಸಂಸ್ಕಾರಕ್ಕೆ ವ್ಯವಸ್ಥೆ' ಮಾಡುತ್ತೇವೆ ಎಂದು ಪ್ರಣಾಳಿಕೆಯಲ್ಲಿ ಘೋಷಿಸಿರುವ ಅಂಶ ಕಂಡು ಜನರು ಬೆಚ್ಚಿಬಿದ್ದಿದ್ದಾರೆ. ಅಷ್ಟೇ ಅಲ್ಲದೆ 'ಬಿಜೆಪಿ ಪಕ್ಷ ಜನರ ಸಾವನ್ನೇ ಬಯಸುತ್ತಿದೆಯಾ?' ಎಂದು ಜನರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪ್ರಣಾಳಿಕೆಯ...
Category: Politics
Post date: 29-08-2121

Kshetra Samachara

Subject ಧಾರವಾಡದ 5ನೇ ವಾರ್ಡ್ ಅಭ್ಯರ್ಥಿ ವಜ್ರದ ಹುಡುಗ ಸೂರಜ್ ಬಿರುಸಿನ ಪ್ರಚಾರ

ಧಾರವಾಡ : ಪಕ್ಷೇತರನಾದ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ 5ನೇ ವಾರ್ಡ್ ಅಭ್ಯರ್ಥಿ ಸೂರಜ್ ಪುಡಕಲಕಟ್ಟಿ ಬಿರುಸಿನ ಪ್ರಚಾರ ವಜ್ರದ ಹೊಳಪು ಪಡೆದಿದ್ದು, ಹೊಸ ಹೊಸ ಅಭಿವೃದ್ಧಿ ನೀಲಿ ನಕಾಶೆ ನೋಡಿ ಜನ ಸೂರಜ್ ಬೆಂಬಲಕ್ಕೆ ನಿಂತಿದ್ದಾರೆ.

ಧಾರವಾಡದ 5ನೇ ವಾರ್ಡ್ ಅಭ್ಯರ್ಥಿ ತನ್ನ ಗೆಳೆಯರ ಬಳಗದ ಸಹಕಾರದಿಂದ ವಾರ್ಡ್ 5ರ ಜನರ ಅರ್ಶಿವಾದಕ್ಕೆ ಶಿರ ಬಾಗಿದ್ದು ಅದಕ್ಕಾಗಿ ಪ್ರತಿಯೊಬ್ಬರ ಮನೆ ಮನ ಎರಡನ್ನು ತಲುಪುವ ಕಾಯಕದಲ್ಲಿ ತೊಡಗಿದ್ದಾರೆ.

ಈಗಾಗಲೇ ತುರುಸಿನ ಸ್ಪರ್ಧೆಯಲ್ಲಿ ಬಿರುಸಿನ ಪ್ರಚಾರ ಆರಂಭಿಸಿದ ಸೂರಜ್ ತಾನು ಮಾಡಿದ ಅಭಿವೃದ್ಧಿ ಕಾರ್ಯದ ಸಹಕಾರ ಹಾಗೂ ಈ ಕಳೆದ 3 ವರ್ಷಗಳಿಂದ ವಾರ್ಡ್ 5ರಲ್ಲಿ...
Category: Politics
Post date: 29-08-2121
City: Hubballi-Dharwad

Public News
PublicNext--587242--node-nid
Subject 10ರ ಬಾಲೆಗೆ ಅಶ್ಲೀಲ ಫೋಟೋ, ವಿಡಿಯೋ ಕಳಿಸುತ್ತಿದ್ದ ಕಾಮುಕರಿಬ್ಬರ ಬಂಧನ

ಮುಂಬೈ: ಮಹಾರಾಷ್ಟ್ರದ ರಾಜಧಾನಿ ಮುಂಬೈನ ಪೊಲೀಸರು ವಿಕೃತಿ ಮೆರೆದ ಇಬ್ಬರು ಕಾಮುಕರನ್ನು ಬಂಧಿಸಿ, ಬಿಸಿ ಮುಟ್ಟಿಸಿದ್ದಾರೆ.

ಹೌದು. 10 ವರ್ಷದ ಬಾಲಕಿಗೆ ಅಶ್ಲೀಲ ಫೋಟೋ ಹಾಗೂ ವಿಡಿಯೋಗಳನ್ನು ಕಳುಹಿಸಿದ ಆರೋಪದಲ್ಲಿ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಆನ್‌ಲೈನ್ ತರಗತಿಗಳಿಗೆ ಹಾಜರಾಗಲು ಬಾಲಕಿಗೆ ಆಕೆಯ ಪೋಷಕರು ಆಕೆಗೆ ಸ್ಮಾರ್ಟ್‌ಫೋನ್ ಕೊಡಿಸಿದ್ದರು. ಆಕೆಯ ನಂಬರ್‌ ತೆಗೆದುಕೊಂಡಿದ್ದ ಆರೋಪಿಗಳು ಬಾಲಕಿಯ ನಗ್ನ ಫೋಟೋಗಳಿಗೆ ಬೇಡಿಕೆ ಇಟ್ಟಿದ್ದರು. ಅಷ್ಟೇ ಅಲ್ಲದೆ ಈ ವಿಚಾರವನ್ನು ಪೋಷಕರಿಗೆ ತಿಳಿಸಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದರು.

ಕಾಮುಕರ ಕಿರುಕುಳದಿಂದ ಬೇಸತ್ತ ಬಾಲಕಿ...
Category: Crime
Post date: 29-08-2121

Public News
PublicNext--587213--node-nid
Subject ಪ್ಯಾರಾಲಂಪಿಕ್ಸ್‌ನಲ್ಲಿ ಬೆಳ್ಳಿ ಪದಕ: ಇತಿಹಾಸ ನಿರ್ಮಿಸಿದ ಭಾರತದ ಭವಿನಾಬೆನ್ ಪಟೇಲ್

ಟೋಕಿಯೋ: ಪ್ಯಾರಾಲಿಂಪಿಕ್ಸ್ ವನಿತಾ ವಿಭಾಗದ ಟೇಬಲ್ ಟೆನ್ನಿಸ್​ನಲ್ಲಿ ಭಾರತದ ಭವಿನಾಬೆನ್ ಪಟೇಲ್ ಬೆಳ್ಳಿ ಪದಕ ಗೆದ್ದು ಇತಿಹಾಸ ಸೃಷ್ಟಿಸಿದ್ದಾರೆ.

ಫೈನಲ್ ಪಂದ್ಯದಲ್ಲಿ ಚೀನಾದ ಯಿಂಗ್ ಜ್ಯೂ ಅವರು ಭವಿನಾಬೆನ್ ಪಟೇಲ್ ವಿರುದ್ಧ 7-11, 5-11, 6-11 ನೇರ ಸೆಟ್‌ಗಳಿಂದ ಜಯಗಳಿಸಿದರು. ಫೈನಲ್ ಸೋತರೂ ಟೇಬಲ್ ಟೆನಿಸ್ ಸ್ಪರ್ಧೆಯಲ್ಲಿ ಭಾರತದ ಪರ ಮೊದಲ ಪದಕ ಪಡೆದ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ.


Category: Sports
Post date: 29-08-2121
Public News
PublicNext--587185--node-nid
Subject ವಿಜಯಪುರ: ಪತ್ನಿಯನ್ನ ಕೊಲೆಗೈದು ಶವ ಹೂತಿಟ್ಟ ಪತಿಯ ಬಂಧನ

ವಿಜಯಪುರ: ವ್ಯಕ್ತಿಯೋರ್ವ ಕ್ಷುಲ್ಲಕ ಕಾರಣಕ್ಕಾಗಿ ಪತ್ನಿಯನ್ನು ಕೊಲೆಗೈದು ಶವವನ್ನು ತೋಟದ ಮನೆಯ ಜಮೀನಿನಲ್ಲಿ ಹೂತಿಟ್ಟ ಘಟನೆ ಜಿಲ್ಲೆಯ ಕೊಲ್ಹಾರ ತಾಲೂಕಿನ ತಡಲಗಿ ಗ್ರಾಮದಲ್ಲಿ ನಡೆದಿದೆ.

ತಡಲಗಿ ಗ್ರಾಮದ ದ್ರಾಕ್ಷಾಯಣಿ ಬನ್ನಿಗೋಳಮಠ(36) ಹತ್ಯೆಯಾಗಿರುವ ಪತ್ನಿ. ಮಕ್ಕಳನ್ನು ದೂರ ಮಾಡಿದ್ದಾಳೆ ಎನ್ನುವ ಕಾರಣಕ್ಕೆ ರಾಚಯ್ಯ ತನ್ನ ಪತ್ನಿ ದ್ರಾಕ್ಷಾಯಣಿಯನ್ನು ಕೊಲೆಗೈದು ಶವವನ್ನು ಮನೆಯ ಪಕ್ಕ ಜಮೀನಿನಲ್ಲಿ ಹೂತಿಟ್ಟು ಪರಾರಿಯಾಗಿದ್ದ.

ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಕೊಲ್ಹಾರ ಠಾಣೆ ಪೊಲೀಸರು ಆರೋಪಿ ರಾಚಯ್ಯನನ್ನು ಬಂಧಿಸಿದ್ದು, ವಿಚಾರಣೆ ನಡೆಸಿದ್ದಾರೆ.


Category: Crime
Post date: 29-08-2121

Pages