News

E.g., 16/06/2021
Public News
Public News
Subject ಕೃಷ್ಣರಾಜಪೇಟೆ: ಈಜಲು ಹೋಗಿ ನೀರು ಪಾಲಾದ ಯುವಕರು

ಮಂಡ್ಯ: ಕೆ.ಆರ್.ಪೇಟೆ ತಾಲೂಕಿನ ಮೋದೂರು ಗ್ರಾಮದಲ್ಲಿ ಕೆರೆಯಲ್ಲಿ ಈಜಲು ಹೋಗಿದ್ದ ಇಬ್ಬರು ಯುವಕರು ಜಲಸಮಾಧಿಯಾಗಿದ್ದಾರೆ. ಕಾರ್ಯಾಚರಣೆ ನಡೆಸಿದ ಅಗ್ನಿಶಾಮಕ ಸಿಬ್ಬಂದಿ ಶವ ಮೇಲೆತ್ತಿದ್ದಾರೆ.

ಗ್ರಾಮದ ರಾಜು(19)ಮತ್ತು ಪ್ರದೀಪ(21) ಎಂಬುವವರೇ ಮೃತರು. ಯುವಕರ ಈ ಸಾವಿನಿಂದ ಇಡೀ ಗ್ರಾಮವೇ ಶೋಕ ಸಾಗರದಲ್ಲಿ ಮುಳುಗಿದೆ. ಕೃಷ್ಣರಾಜಪೇಟೆ ಗ್ರಾಮಾಂತರ ಠಾಣೆಯ ಪೋಲಿಸ್ ಇನ್ಸ್‌ಪೆಕ್ಟರ್ ಕೆ.ಎಸ್.ನಿರಂಜನ್ ಸ್ಥಳಕ್ಕೆ ಭೇಟಿ ನೀಡಿ ಕೆರೆಯ ಬಳಿ ಜನರು ಗುಂಪು ಸೇರದಂತೆ ತಡೆದು ಮೃತರಾದ ಯುವಕರ ಕುಟುಂಬ ವರ್ಗದವರಿಗೆ ಸಾಂತ್ವನ ಹೇಳಿದರು. ಇಬ್ಬರು ಯುವಕರು ನೀರಿನಲ್ಲಿ ಮುಳುಗಿ ಜಲಸಮಾಧಿಯಾಗಿರುವ ಬಗ್ಗೆ ಕೆ.ಆರ್.ಪೇಟೆ...
Category: Accident
Post date: 12-06-2121

Kshetra Samachara
Kshetra Samachara
Subject ಹುಬ್ಬಳ್ಳಿ: ತೈಲ ಬೆಲೆ ಏರಿಕೆ ವಿರುದ್ಧ ಸಿಡಿದೆದ್ದ ಕೈ ಕಾರ್ಯಕರ್ತರು

ಹುಬ್ಬಳ್ಳಿ- ಕೇಂದ್ರ ಸರ್ಕಾರ ತೈಲ ಬೆಲೆ ಏರಿಕೆ ಖಂಡಿಸಿ, ಕಾಂಗ್ರೆಸ್ ಕಾರ್ಯಕರ್ತರು ನಗರದ ಹೊಸೂರ ವೃತ್ತದಲ್ಲಿ ಪ್ರತಿಭಟನೆ ನಡೆಸಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ತೈಲ ಬೆಲೆ ಏರಿಕೆಯಿಂದ ಜನಸಾಮಾನ್ಯರ ಬದುಕು ದುಸ್ತರವಾಗಿದೆ. ಕೊರೋನಾದಂತಹ ಸಂಕಷ್ಟ ಕಾಲದಲ್ಲಿ ಕೇಂದ್ರ ಸರ್ಕಾರ ಪದೇ ಪದೇ ತೈಲ ಬೆಲೆ ಏರಿಕೆ ಮಾಡಿ ಜನರ ಬದುಕಿನೊಂದಿಗೆ ಚೆಲ್ಲಾಟವಾಡುತ್ತಿದೆ ಎಂದು ದೂರಿದರು. ಈ ಕೂಡಲೇ ತೈಲ ಬೆಲೆಯನ್ನು ಇಳಿಕೆ ಮಾಡಬೇಕು. ಇಲ್ಲದಿದ್ದರಿಂದ ಕಾಂಗ್ರೆಸ್ ಪಕ್ಷದ ವತಿಯಿಂದ ರಾಜಾದ್ಯಂತ ಉಗ್ರ ಹೋರಾಟ ನಡೆಸಲಾಗುವುದು ಎಂದೂ ಪ್ರತಿಭಟನಾನಿರತರು ಎಚ್ಚರಿಕೆ ನೀಡಿದರು.
ಪ್ರಧಾನಿ...
Category: Politics
Post date: 12-06-2121
City: Hubballi-Dharwad

Kshetra Samachara
Kshetra Samachara
Subject ಹುಬ್ಬಳ್ಳಿ: ಇನ್ಫೋಸಿಸ್ ಕಾರ್ಯ ನಿಜಕ್ಕೂ ಶ್ಲಾಘನೀಯ: ದತ್ತಮೂರ್ತಿ...!

ಹುಬ್ಬಳ್ಳಿ: ಕೋವಿಡ್ ಮಹಾಮಾರಿಯ ಸಂದರ್ಭದಲ್ಲಿ ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷರಾದ ಸುಧಾಮೂರ್ತಿಯವರು ಉತ್ತಮ ಸೇವೆಯನ್ನು ಸಲ್ಲಿಸುತ್ತಿದ್ದು, ರಾಷ್ಟ್ರೋತ್ಥಾನ ರಕ್ತನಿಧಿಯ ಮೂಲಕ ಈಗಾಗಲೇ 5000 ಆಹಾರ ಕಿಟ್ ಗಳನ್ನು ರಾಜ್ಯದ ವಿವಿಧ ಮೂಲೆಯ ಕಡು ಬಡವರಿಗೆ ತಲುಪಿಸುವ ಕಾರ್ಯ ಮಾಡಿದ್ದಾರೆ ಎಂದು ರಾಷ್ಟ್ರೋತ್ಥಾನ ರಕ್ತನಿಧಿಯ ಮುಖಂಡ ದತ್ತಮೂರ್ತಿ ಕುಲಕರ್ಣಿ ಹೇಳಿದರು.

ನಗರದಲ್ಲಿಂದು ಸುದ್ಧಿಗೋಷ್ಟಿ ನಡೆಸಿ ಮಾತನಾಡಿದ ಅವರು, ಈಗಾಗಲೇ ರಾಷ್ಟ್ರೋತ್ಥಾನ ರಕ್ತನಿಧಿಗೆ ಥರ್ಮಲ್ ಸ್ಕ್ರೀನಿಂಗ್, ಆಕ್ಸಿ ಪಲ್ಸ್ ಮೀಟರ್, ಫೇಸ್ ಶಿಲ್ಡ್, ಹ್ಯಾಂಡ್ ಸ್ಯಾನಿಟೈಸರ್ ಸೇರಿದಂತೆ ಇಪ್ಪತ್ತು ಲಕ್ಷ ಮೌಲ್ಯದ ಉಪಕರಣಗಳನ್ನು...
Category: Public News
Post date: 12-06-2121
City: Hubballi-Dharwad

Kshetra Samachara
Kshetra Samachara
Subject ಕುಂದಗೋಳ : ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ, ತೊಲಗಲಿ ಮೋದಿ ವೈರಸ್ !

ಕುಂದಗೋಳ : ಕೊರೊನಾ ವೈರಸ್ ಲಾಕ್ ಡೌನ್ ಅವಧಿಯಲ್ಲಿ ಜನರಿಗೆ ಅಗತ್ಯವಾದ ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ ಮಾಡುತ್ತಿರುವ ಬಿಜೆಪಿ ಸರ್ಕಾರದ ಧೋರಣೆಯನ್ನು ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು ಕುಂದಗೋಳ ಪಟ್ಟಣದ ಪೆಟ್ರೋಲ್ ಬಂಕ್'ನಲ್ಲಿ ಇಂದು ಶಾಸಕಿ ಕುಸುಮಾವತಿ ಶಿವಳ್ಳಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.

ತೊಲಗಲಿ ಮೋದಿ ವೈರಸ್, ಮೋದಿ ಮಾತಲ್ಲಿ ಸತ್ಯಕ್ಕಿಂತ ಸುಳ್ಳೇ ಜಾಸ್ತಿ, ಮಾರಕ ಮೋದಿಯ ಡಬಲ್ ಇಂಜಿನ್ ಸರ್ಕಾರ, 100+ ಪೆಟ್ರೋಲ್ ಪ್ರೈಸ್ ನಾಟ್ ಔಟ್ ಎಂಬ ಭಿತ್ತಿ ಪತ್ರಗಳನ್ನು ಪ್ರದರ್ಶಿಸಿ ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ...
Category: Politics
Post date: 12-06-2121
City: Hubballi-Dharwad

Kshetra Samachara
Kshetra Samachara
Subject ಕಲಘಟಗಿ: ಇಂಧನ‌ ಬೆಲೆ ಏರಿಕೆ ವಿರೋಧಿಸಿ ಸೈಕಲ್‌ ತುಳಿದ ಮಾಜಿ ಸಚಿವ ಸಂತೋಷ ಲಾಡ್

ಕಲಘಟಗಿ: ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆ ವಿರೋಧಿಸಿ ಮಾಜಿ ಸಚಿವ ಸಂತೋಷ ಲಾಡ್ ಸೈಕಲ್‌ ತುಳಿದು ತಮ್ಮ ಆಕ್ರೋಶ ಹೊರ ಹಾಕಿದರು.

ಇಂಧನ ಬೆಲೆ ಏರಿಕೆಯನ್ನ ಖಂಡಿಸಿದ ಅವರು ಪಟ್ಟಣದಲ್ಲಿನ ಪೆಟ್ರೋಲ್ ಪಂಪ್‌ನಲ್ಲಿ ಸೈಕಲ್ ಗೆ ಬೈಕ್ ಕಟ್ಟಿ ಸೈಕಲ್ ಓಡಿಸಿ ವಿಶೇಷವಾಗಿ ಪ್ರತಿಭಟನೆ‌ ನಡೆಸಿದರು.

ಕೇಂದ್ರ ಸರಕಾರದ ಪೆಟ್ರೋಲ್ ‌ಬೆಲೆ‌ ಏರಿಕೆಯ ವಿರುದ್ಧ ಸೈಕಲ್ ತುಳಿದು ಅಣುಕ ಮಾಡಿ ಪ್ರತಿಭಟಿಸಿದರು.ಬ್ಲಾಕ್‌‌ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ ಮುರಳ್ಳಿ,ಸುಧೀರ ಬೋಳಾರ,ಅಜಮತ್‌ ಜಹಗೀರದಾರ ಸೇರಿದಂತೆ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.


Category: Politics
Post date: 12-06-2121
City: Hubballi-Dharwad
Kshetra Samachara
Kshetra Samachara
Subject ಗದಗ: ಪಡಿತರ ಅಕ್ಕಿ ಮೇಲೆ ಖದೀಮರ ಕಣ್ಣು: ಎಗ್ಗಿಲ್ಲದೇ ನಡೆಯುತ್ತಿದೆ ದಂಧೆ...!

ಗದಗ: ಲಾಕ್ ಡೌನ್ ದಲ್ಲಿ ಅಧಿಕಾರಿಗಳು ಬ್ಯುಸಿ ಇರುವುದನ್ನೇ ಬಂಡವಾಳ ಮಾಡಿಕೊಂಡ ಅಕ್ರಮ ಅಕ್ಕಿ ದಂಧೆಕೋರರು ಮನೆ ಮನೆಗೆ ತೆರಳಿ ಅಕ್ಕಿ ತುಂಬಿಕೊಂಡು ಮಾರಾಟ ಮಾಡುತ್ತಿರುವ ಘಟನೆ ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲೂಕಿನಲ್ಲಿ ನಡೆದಿದೆ.

ಹೌದು..ಬಡವರ ಹೊಟ್ಟೆ ತುಂಬಿಸಲು ಸರ್ಕಾರ ನೀಡಿದ ಅಕ್ಕಿ ಮೇಲೆ ಅಕ್ಕಿ ಕಳ್ಳರ ಕಣ್ಣು ಬಿದ್ದಿದೆ. ಹೀಗಾಗಿ ಕೆಜಿಗೆ 12 ರೂಪಾಯಿ ಕೊಟ್ಟು ಖರೀದಿಸುತ್ತಾರೆ. ಖರೀದಿಸಿದ ಅಕ್ಕಿಯನ್ನು ದುಪ್ಪಟ್ಟು ಹಣಕ್ಕೆ ಮಾರಾಟ ಮಾಡುತ್ತಾರೆ.

ಹಣದ ಆಸೆಗೆ ಬಡವರ ಅಕ್ಕಿ ಮೇಲೆ ಕಣ್ಣ ಹಾಕಿದ ಖದೀಮರು ರಾತ್ರೋರಾತ್ರಿ ಗೂಡ್ಸ್ ವಾಹನದ ಮೂಲಕ ಲಕ್ಷ್ಮೇಶ್ವರ ದಿಂದ ಹಾವೇರಿ ಜಿಲ್ಲೆ...
Category: Crime
Post date: 12-06-2121
City: Hubballi-Dharwad

Kshetra Samachara
Kshetra Samachara
Subject ನವಲಗುಂದ: ಕಿಟ್ ವಿತರಣೆ ವೇಳೆ ಮಾಯವಾದ ಸಾಮಾಜಿಕ ಅಂತರ

ನವಲಗುಂದ : ಕೋವಿಡ್ ಸಂಕಷ್ಟದಲ್ಲಿರುವ ಬಡ ಜನರಿಗೆ ಆಹಾರ ಕಿಟ್ ನೀಡುವ ಹಿತದೃಷ್ಟಿಯಿಂದ ಶನಿವಾರ ಪಟ್ಟಣದ ಶಂಕರ ಕಾಲೇಜಿನ ಮೈದಾನದಲ್ಲಿ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ಜನರು ಸಾಮಾಜಿಕ ಅಂತರವನ್ನು ಗಾಳಿಗೆ ತೂರಿ ಕಿಟ್ ಇರುವ ವಾಹನಗಳಿಗೆ ಮುಗಿಬಿದ್ದ ದೃಶ್ಯಗಳು ಎಲ್ಲೆಡೆ ಸಾಮಾನ್ಯವಾಗಿದ್ದವು.

ಹೌದು ಧಾರವಾಡ ಜಿಲ್ಲಾ ಗ್ರಾಮೀಣ ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ವಿನೋದ ಅಸೂಟಿ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಕಾರ್ಯಕ್ರಮದಲ್ಲಿ ಆಹಾರ ಕಿಟ್ ವಿತರಿಸಲಾಗುತ್ತಿದ್ದು, ಈ ವೇಳೆ ಜನರು ಮಾಸ್ಕ್ ಮತ್ತು ಸಾಮಾಜಿಕ ಅಂತರವನ್ನು ಮರೆತಿದ್ದರು. ಇನ್ನು ವಿತರಣೆ ವೇಳೆ ಸರಿಯಾದ ನಿರ್ವಹಣೆ ಕೊರತೆಯೂ ಇತ್ತು...
Category: Politics, Others, COVID
Post date: 12-06-2121
City: Hubballi-Dharwad

Public News
PublicNext--512662--node-nid
Subject ರೋಹಿಣಿ ಸಿಂಧೂರಿ ಪರ ಸಹಿ ಸಂಗ್ರಹ ಅಭಿಯಾನ

ಮೈಸೂರು: ಜಿಲ್ಲೆಯ ನಿರ್ಗಮಿತ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರನ್ನು ವಾಪಸ್ ಜಿಲ್ಲೆಗೆ ಕರೆಸಬೇಕೆಂಬ ಕೂಗು ಹೆಚ್ಚಾಗುತ್ತಿದೆ. ಅದಕ್ಕಾಗಿ ಜಿಲ್ಲೆಯಲ್ಲಿ ಸಹಿ ಸಂಗ್ರಹ ಅಭಿಯಾನವೂ ನಡೆಯುತ್ತಿದೆ.

ಚೇಂಜ್ ಆರ್ಗ್ ಎಂಬ ಸಾಮಾಜಿಕ ಮಾಧ್ಯಮದಲ್ಲಿ "ಬ್ರಿಂಗ್ ಬ್ಯಾಕ್ ರೋಹಿಣಿ ಸಿಂಧೂರಿ" ಎಂಬ ಹೆಸರಲ್ಲಿ ಸಹಿ ಸಂಗ್ರಹ ಅಭಿಯಾನ ನಡೆಯುತ್ತಿದೆ. ಈಗಾಗಲೇ ನೂರಾರು ಜನ ಪ್ರಜ್ಞಾವಂತರು ಇದಕ್ಕೆ ಸಹಿ ಹಾಕಿದ್ದಾರೆ. ಈ ನಡುವೆ ಜಿಲ್ಲೆಯ ರಾಜಕಾರಣಿಗಳಿಂದ ರೋಹಿಣಿ ಮೇಲೆ ಆರೋಪಗಳು ಕೇಳಿ ಬರುತ್ತಲೇ ಇವೆ.


Category: Politics
Post date: 12-06-2121
Kshetra Samachara
Kshetra Samachara
Subject ಹುಬ್ಬಳ್ಳಿ: ಕಿಶನ್ ಬೆಳಗಾವಿ ಗೆಳೆಯರ ಬಳಗದ ಕಾರ್ಯಕ್ರಮಕ್ಕೆ ಡಿಸಿಪಿ ರಾಮರಾಜನ್ ಚಾಲನೆ

ಹುಬ್ಬಳ್ಳಿ: ಕಿಶನ್ ಬೆಳಗಾವಿ ಗೆಳೆಯರ ಬಳಗದ ವತಿಯಿಂದ ಬಡ ಕುಟುಂಬಗಳಿಗೆ ಆಹಾರ ಕಿಟ್ ವಿತರಣಾ ಕಾರ್ಯಕ್ರಮಕ್ಕೆ ಡಿಸಿಪಿ ಕೆ.ರಾಮರಾಜನ್ ಹಾಗೂ ಎಸಿ ಗೋಪಾಲಕೃಷ್ಣ ಚಾಲನೆ ನೀಡಿದರು.

ಕಿಲ್ಲರ್ ಕೊರೋನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಘೋಷಣೆ ಮಾಡಿರುವ ಲಾಕ್ ಡೌನ್ ನಿಂದ ಸಾರ್ವಜನಿಕರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು, ಜೀವನ ನಡೆಸುವುದು ಕಷ್ಟವಾಗಿದೆ ಈ ನಿಟ್ಟಿನಲ್ಲಿ ಯುವ ಉತ್ಸಾಹಿಗಳ ಇಂತಹ ಕಾರ್ಯಕ್ಕೆ ಮುಂದಾಗಿರುವುದು ಶ್ಲಾಘನೀಯ ಎಂದು ಅಭಿನಂದನೆ ಸಲ್ಲಿಸಿದರು. ಇದೇ ವೇಳೆ ವಿದ್ಯಾನಗರದ ನೇಕಾರ ಕಾಲೋನಿಯಲ್ಲಿ ಕಿಟ್ ವಿತರಣೆ ಮಾಡಿ ಜನರಿಗೆ ಕೋವಿಡ್ ಬಗ್ಗೆ ಎಚ್ಚರ ವಹಿಸುವ ಕುರಿತು ಮಾಹಿತಿ ನೀಡಿದರು.


Category: Others, COVID
Post date: 12-06-2121
City: Hubballi-Dharwad

Pages