E.g., 26/09/2021
Kshetra Samachara
PublicNext-522394-588026-Mangalore-Cultural-Activity-node
Subject ಪಕ್ಷಿಕೆರೆ: ಹಿಂದೂ ಸಂಘಟನೆಗಳಿಂದ ಪಜೀರಿನ ಗೋವನಿತಾಶ್ರಮಕ್ಕೆ ಹಸಿಹುಲ್ಲು ವಿತರಣೆ

ಮುಲ್ಕಿ:ವಿಶ್ವ ಹಿಂದೂ ಪರಿಷತ್ ಬಜರಂಗದಳ ಮುಲ್ಕಿ ಪ್ರಖಂಡ ನಾಗಬ್ರಹ್ಮ ಶಾಖೆ ಹೊಸಕಾಡು ವತಿಯಿಂದ ಕೋಣಾಜೆ ಸಮೀಪದ ಪಜೀರಿನ ಗೋವನಿತಾಶ್ರಮ ಗೋಶಾಲೆಗೆ ಹಸಿ ಹುಲ್ಲನ್ನು ನೀಡಲಾಯಿತು.

ಈ ಸೇವಾ ಕಾರ್ಯದಲ್ಲಿ ಪ್ರಖಂಡದ ಅಧ್ಯಕ್ಷರಾದ ಕೆ.ವಿ.ಶೆಟ್ಟಿ, ಕಾರ್ಯದರ್ಶಿ ಶಾಮ್ ಸುಂದರ್ ಶೆಟ್ಟಿ, ಗೋರಕ್ಷಾ ಪ್ರಮುಖರಾದ ಅಮಿತ್ ರಾಜ್ ಶೆಟ್ಟಿ, ಕಾರ್ನಾಡು ಬಜರಂಗದಳದ ಸಂಚಾಲಕರಾದ ದೀಕ್ಷಿತ್ ಕುಮಾರ್ ,ರಾಜೇಶ್ ಎಸ್ಕೋಡಿ, ಹೊಸಕಾಡು ಘಟಕದ ವಿ.ಹಿಂ.ಪ. ಅಧ್ಯಕ್ಷರಾದ ಕಿಶೋರ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.


Category: Cultural Activity
Post date: 29-08-2121
City: Mangalore
Kshetra Samachara
PublicNext-522317-587925-Udupi-Mangalore-Politics-node
Subject ಉಡುಪಿ ಜಿಲ್ಲಾಧಿಕಾರಿ ಜಿ ಜಗದೀಶ್ ವರ್ಗಾವಣೆ: ಕೂರ್ಮ ರಾವ್ ಎಂ ನೂತನ ಜಿಲ್ಲಾಧಿಕಾರಿ

ಉಡುಪಿ: ಉಡುಪಿ ಜಿಲ್ಲಾಧಿಕಾರಿ ಜಿ ಜಗದೀಶ್ ವರ್ಗಾವಣೆಗೊಂಡಿದ್ದಾರೆ.ಅವರ ಸ್ಥಾನಕ್ಕೆ ಕೂರ್ಮ ರಾವ್ ಎಂ ಉಡುಪಿಯ ನೂತನ ಜಿಲ್ಲಾಧಿಕಾರಿಯಾಗಿ ನಿಯುಕ್ತಿಗೊಂಡಿದ್ದಾರೆ.

ಜಿ.ಜಗದೀಶ್ ಮುಖ್ಯಮಂತ್ರಿಗಳ ಜಂಟಿ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದು ,ಪದೋನ್ನತಿ ದೊರೆತಿದೆ.ಉಡುಪಿಗೆ ಜಿಲ್ಲಾಧಿಕಾರಿ ಯಾಗಿ ನಿಯೋಜನೆಗೊಂಡಿರುವ ಕೂರ್ಮ ರಾವ್ ,ಈಶಾನ್ಯ ಸಾರಿಗೆಯ ಎಂಡಿಯಾಗಿದ್ದರು.ಈ ಸಂಬಂಧ ತಕ್ಷಣದಿಂದ ಜಾರಿಗೆ ಬರುವಂತೆ
ರಾಜ್ಯ ಸರಕಾರದ ಆದೇಶ ಹೊರಡಿಸಿದೆ.


Category: Politics
Post date: 29-08-2121
City: Udupi, Mangalore
Public News
PublicNext-522269-587850-Sports-node
Subject ಟೋಕಿಯೊ ಪ್ಯಾರಾಲಂಪಿಕ್ಸ್ : ಹೈಜಂಪ್ ನಲ್ಲಿ ಬೆಳ್ಳಿ ಗೆದ್ದ ನಿಶಾದ್ ಕುಮಾರ್

ನವದೆಹಲಿ: ಟೋಕಿಯೋ ಪ್ಯಾರಾ ಒಲಿಂಪಿಕ್ಸ್ ನಲ್ಲಿ ಭಾರತೀಯ ಅಥ್ಲೀಟ್ ಗಳ ಪದಕ ಬೇಟೆ ಮುಂದುವರಿದಿದೆ. ಟೇಬಲ್ ಟೆನಿಸ್ ನಲ್ಲಿ ಭವಿನಾ ಪಟೇಲ್ ಬೆಳ್ಳಿ ಗೆದ್ದ ಬೆನ್ನಲ್ಲೇ ಹೈಜಂಪ್ ನಲ್ಲಿ ನಿಶಾದ್ ಕುಮಾರ್ ಬೆಳ್ಳಿ ಪದಕ ಗೆದ್ದಿದ್ದಾರೆ.ಪದಕ ಗೆದ್ದ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ನಿಶಾದ್ ಕುಮಾರ್ ಗೆ ಕರೆ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ.

ಕೋಟ್ಯಾಂತರ ಭಾರತೀಯರಿಗೆ ಸ್ಪೂರ್ತಿಯಾಗಿದ್ದೀರಿ. ದೇಶದ ಕೀರ್ತಿ ಪತಾಕೆ ಹಾರಿಸಿದ ನಿಮ್ಮ ಭವಿಷ್ಯ ಉಜ್ವಲವಾಗಿರಲಿ ಎಂದಿದ್ದಾರೆ. ಪ್ರಧಾನಿ ಪ್ರೋತ್ಸಾಹ ಹಾಗೂ ಬೆಂಬಲಕ್ಕೆ ನಿಶಾದ್ ಕುಮಾರ್ ಧನ್ಯವಾದ ಹೇಳಿದ್ದಾರೆ. ಟೋಕಿಯೋ ಪ್ಯಾರಾ ಒಲಿಂಪಿಕ್ಸ್ ಹೈಜಂಪ್ ಅಂತಿಮ...
Category: Sports
Post date: 29-08-2121

Public News

Subject ಅಮೆರಿಕ ಸೇನೆ ಗುರಿಯಾಗಿಸಿಕೊಂಡು ಕಾಬೂಲ್ ನಲ್ಲಿ ಮತ್ತೊಂದು ದಾಳಿ : ಇಬ್ಬರ ಸಾವು

ಕಾಬೂಲ್ : ಅಫ್ಘಾನಿಸ್ತಾನದಲ್ಲಿ ಸದ್ಯ ನೈಜ ನಕರ ಕಾಣುತ್ತಿದೆ. ನೆತ್ತರ ಕೋಡಿ ಹರಿಯುತ್ತಿದೆ. ಜೀವ ಉಳಿಸಿಕೊಳ್ಳಲು ಜನ ಹರಸಾಹಸ ಮಾಡುತ್ತಿದ್ದಾರೆ. ಕಳೆದ 4 ದಿನದಲ್ಲಿ ಏರ್ಪೋರ್ಟ್ ಹೊರಗೆ 3 ಬಾರಿ ಸ್ಫೋಟ ನಡೆದಿದೆ. ಗುರುವಾರ ನಡೆದ ದಾಳಿಯಲ್ಲಿ 183 ಜನ ಮೃತಪಟ್ಟಿದ್ದರು. ಅಮೆರಿಕದ 13 ಯೋಧರು ಸೇರಿ 183 ಜನ ಮೃತಪಟ್ಟಿದ್ದರು.

ಇಂದು ಮತ್ತೊಂದು ರಾಕೆಟ್ ದಾಳಿಯಲ್ಲಿ ಇಬ್ಬರು ಸಾವನ್ನಪ್ಪಿರುವ ಬಗ್ಗೆ ವರದಿಯಾಗಿದೆ. ಇಂದು ಸಂಜೆ ಕಾಬೂಲ್ ವಿಮಾನ ನಿಲ್ದಾಣದ ಪಶ್ಚಿಮ ರಿಹಾಯಶಿ ಇಲಾಖೆಯ ಖಾಜಾ-ಏ-ಬುಗಾರದಲ್ಲಿ ಈ ದಾಳಿ ನಡೆದಿದೆ. ಐಸಿಸ್-ಕೆ ಉಗ್ರ ಸಂಘಟನೆ ಕಾಬೂಲ್ ವಿಮಾನ ನಿಲ್ದಾಣದಲ್ಲಿರುವ ಅಮೆರಿಕ ಸೇನೆಯನ್ನು...
Category: International
Post date: 29-08-2121

Public News

Subject ಚಾಲಕನ ಸಮಯ ಪ್ರಜ್ಞೆ ತಪ್ಪಿದ ಅಪಘಾತ : ವಿಡಿಯೋ ವೈರಲ್

ನವದೆಹಲಿ: ಕೆಲವೊಂದು ಸಂದರ್ಭಗಳಲ್ಲಿ ಚಾಲಕರ ಸಮಯ ಪ್ರಜ್ಞೆ ಭಾರಿ ಅನಾಹುತಗಳನ್ನು ತಪ್ಪಿಸುತ್ತವೆ. ಸದ್ಯ ಉತ್ತರ ಪ್ರದೇಶದ ಟೋಲ್ ಪ್ಲಾಜಾವೊಂದರ ಬಳಿ ಮುಂದಿನ ವಾಹನಗಳಿಗೆ ಇನ್ನೇನು ಡಿಕ್ಕಿ ಹೊಡೆಯಿತು ಅನ್ನುವಷ್ಟರಲ್ಲಿ ಟ್ರಕ್ ನಿಯಂತ್ರಣಕ್ಕೆ ತೆಗೆದುಕೊಂಡ ಚಾಲಕ ದೊಡ್ಡ ಅನಾಹುತವನ್ನು ತಪ್ಪಿಸಿದ್ದಾನೆ.

ದಾದ್ರಿ-ಲುಹರ್ಲಿ ಮಾರ್ಗದಲ್ಲಿ ಬರುತ್ತಿದ್ದ ಟ್ರಕ್ ಬ್ರೇಕ್ ವಿಫಲವಾಗಿದೆ. ಇದರಿಂದ ರಸ್ತೆ ಮಧ್ಯದಿಂದ ಅಡ್ಡಾದಿಡ್ಡಿಯಾಗಿ ಬರುವ ಟ್ರಕ್ ಮುಂದೆ ಎರಡೂ ವಾಹನಗಳಿದ್ದರೂ ಅವುಗಳಿಗೆ ಡಿಕ್ಕಿ ಹೊಡೆಯದೇ ಟೋಲ್ ಬೂತ್ ನ ಕೊನೆಯ ಪಥದಲ್ಲಿ ಸಾಗುವ ಮೂಲಕ ದೊಡ್ಡ ಅಪಘಾತವೊಂದು ತಪ್ಪಿದಂತಾಗಿದೆ.


Category: Human Stories, Accident
Post date: 29-08-2121
Public News
PublicNext--587838--node-nid
Subject ಟೋಕಿಯೊ ಪ್ಯಾರಾಲಂಪಿಕ್ಸ್: ಕಂಚಿನ ಪದಕ ಗೆದ್ದ ವಿನೋದ್ ಕುಮಾರ್!

ಟೋಕಿಯೊ: ಟೋಕಿಯೊ ಪ್ಯಾರಾಲಂಪಿಕ್ಸ್ ನಲ್ಲಿ ಪುರುಷರ ಡಿಸ್ಕಸ್ ಥ್ರೋ ಎಫ್ 52ನಲ್ಲಿ ವಿನೋದ್ ಕುಮಾರ್ ಕಂಚಿನ ಪದಕ ಗೆದ್ದಿದ್ದಾರೆ.
ಡಿಸ್ಕಸ್ ಥ್ರೋನಲ್ಲಿ ವಿನೋದ್ ಕುಮಾರ್ 19.91 ಮೀಟರ್ ಅತ್ಯುತ್ತಮ ಪ್ರಯತ್ನದೊಂದಿಗೆ ಕಂಚಿನ ಪದಕ ಗೆದ್ದು ತೃಪ್ತಿ ಪಡೆದಿದ್ದಾರೆ.
ಈ ಮೂಲಕ ವಿನೋದ್ ಕುಮಾರ್ ಏಷ್ಯನ್ ದಾಖಲೆಯನ್ನು ಮುರಿದರು. ಟೋಕಿಯೋ 2020 ಪ್ಯಾರಾಲಿಂಪಿಕ್ಸ್ ನಲ್ಲಿ ಭಾರತವು ಇದುವರೆಗೆ ಮೂರು ಪದಕಗಳನ್ನು ಗೆದ್ದಿದೆ.


Category: Sports
Post date: 29-08-2121
Public News
PublicNext--587958--node-nid
Subject 21 ಕೋಟಿ ರೂ. ಮೌಲ್ಯದ 3400 ಕೆಜಿ ಗಾಂಜಾ ಪತ್ತೆ!

ಬೆಂಗಳೂರು: ಮೇಲ್ನೋಟಕ್ಕೆ ಅದು ನರ್ಸರಿಯಿಂದ ಸಸಿಗಳನ್ನು ಸಾಗಿಸುತ್ತಿರುವ ಲಾರಿ ಆದ್ರೆ ಸಸಿ ಕೆಳಗಿದ್ದ ಗಾಂಜಾ ಘಾಟು ವೈರಲ್ ಆಗಿದ್ದು ನಿಜಕ್ಕೂ ಶಾಕಿಂಗ್ ಸಂಗತಿ. ಬೆಂಗಳೂರು ವಲಯ ಎನ್ ಸಿಬಿ ಅಧಿಕಾರಿಗಳು ಒಟ್ಟು 21 ಕೋಟಿ ರೂ. ಮೌಲ್ಯದ 3400 ಕೆಜಿ ಗಾಂಜಾವನ್ನು ಪತ್ತೆ ಹಚ್ಚಿ ಮೂವರು ದುಷ್ಕರ್ಮಿಗಳನ್ನು ವಶಕ್ಕೆ ಪಡೆದಿದ್ದಾರೆ.

ಒಟ್ಟು 131 ಗೋಣಿ ಚೀಲಗಳಲ್ಲಿ ಗಾಂಜಾ ಶೇಖರಿಸಿ ಸಾಗಾಟ ನಡೆಸುತ್ತಿದ್ದ ಸಿಂಧೆ, ಕಾಂಬ್ಳೆ ಮತ್ತು ಜೋಗದಂದ್ ಎಂಬುವರನ್ನು ಬಂಧಿಸಲಾಗಿದೆ. ಲಾರಿಯಲ್ಲಿ ಸಸಿಗಳ ರಾಶಿಯ ಕೆಳಗೆ ಮಣ್ಣಿನ ಜೊತೆ ಪ್ಲಾಸ್ಟಿಕ್ನಿಂದ ಗಾಂಜಾ ಸುತ್ತಿ ಮಣ್ಣು ಮುಚ್ಚಿ ಸಾಗಿಸುತ್ತಿದ್ದರು ಎಂದು...
Category: Crime
Post date: 29-08-2121

Kshetra Samachara

Subject ಉಡುಪಿ: ಕೊರಂಗ್ರಪಾಡಿ; ಮಹಿಳೆ ಆತ್ಮಹತ್ಯೆ

ಉಡುಪಿ: ಮಹಿಳೆಯೊರ್ವಳು ಫ್ಯಾನಿಗೆ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆಯು ಕೊರಂಗ್ರಪಾಡಿ ಬೊಬ್ಬರ್ಯಗುಜ್ಜಿಯಲ್ಲಿ ರವಿವಾರ ನಡೆದಿದೆ. ಮೃತ ಮಹಿಳೆಯನ್ನು ಮಂಜುಳ (49 ವ) ಗಂಡ ಪಾಂಡುರಂಗ ರಾವ್ ಪಠಾಣ್ಕರ್ ಎಂದು ಗುರುತಿಸಲಾಗಿದೆ. ಇವರು ಕೆಲವು ಸಮಯದಿಂದ ಖಿನ್ನತೆಯಿಂದ ಬಳಲುತ್ತಿದ್ದರು ಎಂದು ತಿಳಿದುಬಂದಿದೆ.

ನಗರ ಪೊಲೀಸ್ ಠಾಣೆಯ ಠಾಣಾಧಿಕಾರಿ ಅಶೋಕ್ ಕುಮಾರ್, ಹಾಗೂ ಸಿಬ್ಬಂದಿಗಳು ಸ್ಥಳದಲ್ಲಿದ್ದು ಕಾನೂನು ಪ್ರಕ್ರಿಯೆ ನಡೆಸಿದರು. ವೈದ್ಯಕೀಯ ಪರೀಕ್ಷೆಗೆ ಶವವನ್ನು ಅಜ್ಜರಕಾಡು ಜಿಲ್ಲಾಸ್ಪತ್ರೆಯ ಶವಗಾರಕ್ಕೆ ಸಾಗಿಸಲು, ಸಮಾಜಸೇವಕ ನಿತ್ಯಾನಂದ ಒಳಕಾಡು, ಮಂಜುನಾಥ ಪೂಜಾರಿ ಇಲಾಖೆಗೆ...
Category: Crime, Accident
Post date: 29-08-2121
City: Udupi, Mangalore

Kshetra Samachara
PublicNext--587836--node-nid
Subject ದ.ಕ.ಜಿಲ್ಲೆಯಲ್ಲಿ ದ್ವಿತೀಯ ಪಿಯುಸಿ ಆರಂಭಕ್ಕೆ ಅಸ್ತು ಎಂದ ಜಿಲ್ಲಾಡಳಿತ : ಸೆ.1 ರಿಂದ ಕ್ಲಾಸ್

ಮಂಗಳೂರು: ಕೊರೊನಾದಿಂದಾಗಿ ಶಾಲಾಕಾಲೇಜುಗಳನ್ನು ಬಂದ್ ಮಾಡಲಾಗಿತ್ತು ಸದ್ಯ ಒಂದೊಂದೆ ತರಗತಿಗಳನ್ನು ಆರಂಭಿಸಲಾಗುತ್ತಿದೆ. ಸದ್ಯ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವಿಡ್ ನಿಯಮ ಪಾಲಿಸುತ್ತಲೇ ಸೆ.1ರಿಂದ ದ್ವಿತೀಯ ಪಿಯುಸಿ ಭೌತಿಕ ತರಗತಿ ಆರಂಭಿಸಲು ಜಿಲ್ಲಾಡಳಿತ ಸಮ್ಮತಿ ನೀಡಿ, ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ ಅದೇಶಿಸಿದ್ದಾರೆ.

ಎಸ್.ಒ.ಪಿ ಅನುಷ್ಠಾನ ಜಾರಿಗೊಳಿಸುವ ಜವಾಬ್ದಾರಿಯನ್ನು ಕಾಲೇಜಿನ ಪ್ರಾಂಶುಪಾಲರು ವಹಿಸುವಂತೆ ಸೂಚನೆ ನೀಡಲಾಗಿದ್ದು, ಕೇರಳದಿಂದ ಬರುವ ವಿದ್ಯಾರ್ಥಿಗಳಿಗೆ ಏಳು ದಿನ ಕ್ವಾರಂಟೈನ್ ಕಡ್ಡಾಯ ಮಾಡಲು ಆದೇಶಿಸಿದೆ. ಕೇರಳದಿಂದ ಪ್ರತಿದಿನ ಬರುವ ವಿದ್ಯಾರ್ಥಿಗಳಿಗೆ 7 ದಿನಕ್ಕೊಮ್ಮೆ...
Category: Education, Government
Post date: 29-08-2121
City: Udupi, Mangalore

Pages